ಮೈಸೂರು
ಗ್ಯಾಂಗ್ ರೇಪ್ ವಿರೋಧಿಸಿ ಎನ್.ಎಸ್.ಯು.ಐ ಪ್ರತಿಭಟನೆ
ಮೈಸೂರು,ಆ.25:- ನಿನ್ನೆ ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ (ಅತ್ಯಾಚಾರ) ವಿರೋಧಿಸಿ ಎನ್.ಎಸ್.ಯು.ಐ ಮೈಸೂರು ಘಟಕದ ವತಿಯಿಂದ ನ್ಯಾಯಾಲಯದ ಮುಂದೆ ಪ್ರತಿಭಟನೆ ಮಾಡಲಾಯಿತು.
ಬಿಜೆಪಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಮತ್ತು ವಿದ್ಯಾರ್ಥಿಗಳು, ಹೆಣ್ಣು ಮಕ್ಕಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಇದನ್ನು ಎನ್.ಎಸ್.ಯು.ಐ ತೀವ್ರವಾಗಿ ಖಂಡಿಸುತ್ತದೆ. ತಕ್ಷಣ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಎನ್.ಎಸ್.ಯು.ಐ ಒತ್ತಾಯಿಸುತ್ತದೆ. ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕರನ್ನು ಸಂಪರ್ಕಿಸಿದ ನಂತರ ನಿನ್ನೆ ಘಟನೆ ನಡೆದರೂ ಇನ್ನೂ ದೂರು ದಾಖಲಾಗಿರಲಿಲ್ಲ. ಎನ್.ಎಸ್.ಯು.ಐ ಪ್ರತಿಭಟನೆ ಮಾಡಿದ ನಂತರ ದೂರು ದಾಖಲು ಮಾಡಿದ್ದು, ನಂತರ ಎನ್.ಎಸ್.ಯು.ಐ ಪ್ರತಿಭಟನೆಯನ್ನು ಕೈ ಬಿಟ್ಟಿದೆ. ಮುಂದಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಕಾಪಾಡುವುದು ಸರ್ಕಾರದ ಕರ್ತವ್ಯ. ಇದೇ ರೀತಿ ಕಾನೂನು ಸುವ್ಯವಸ್ಥೆ ಹದಗೆಟ್ಟಲ್ಲಿ ಎನ್.ಎಸ್.ಯು.ಐ ಉಗ್ರವಾದ ಹೋರಾಟ ಮಾಡಿ ಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಎನ್.ಎಸ್.ಯು.ಐ ಪದಾಧಿಕಾರಿಗಳು, ಯೂತ್ ಕಾಂಗ್ರೆಸ್ ಮುಖಂಡರುಗಳು ಮತ್ತು ಯುವ ಮುಖಂಡರುಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)