ಸುದ್ದಿ ಸಂಕ್ಷಿಪ್ತ

ನಾವು ಪೌರರು ಮಹಾ ಪೌರರು : ಶಿಬಿರ ಚಾಲನೆ ಮೇ.1ರಿಂದ

ಆದಿ ದ್ರಾವಿಡ ತಮಟೆ ಮತ್ತು ನಗರಿ ಸಾಂಸ್ಕೃತಿಕ ಕಲಾವೃಂದದಿಂದ ‘ನಾವು ಪೌರರು ಮಹಾ ಪೌರರು’ ಪೌರ ಕಾರ್ಮಿಕರ ಮಕ್ಕಳ ಸಾಂಸ್ಕೃತಿಕ ಶಿಬಿರವನ್ನು ಮೇ.1ರಂದು ಮಧ್ಯಾಹ್ನ 3ಕ್ಕೆ ವಿಶ್ವೇಶ್ವರ ನಗರದ ಡಿ.ದೇವರಾಜು ಅರಸ್ ಕಾಲೋನಿಯ ಶ್ರೀದೇವಿ ಪಟ್ಟಲ್ಲದಮ್ಮ ದೇವಸ್ಥಾನದ ಆವರಣದಲ್ಲಿ ಶಾಸಕ ಎಂ.ಕೆ.ಸೋಮಶೇಖರ್ ಚಾಲನೆ ನೀಡುವರು, ಮಹಾಪೌರ ಎಂ.ಜೆ.ರವಿಕುಮಾರ್ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ವಿ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಚನ್ನಪ್ಪ, ಪತ್ರಕರ್ತ ರಾಜು, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ್, ಪಾಲಿಕೆ ಸದಸ್ಯೆ ಉಮಾಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಹಾಗೂ ಇತರರು ಉಪಸ್ಥಿತರಿರುವರು.

ಶಿಬಿರವನ್ನು ಸಮಾಜ ಕಲ್ಯಾಣ ಇಲಾಖೆ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಜಾನಪದ ಅಕಾಡೆಮಿ ಇವರುಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ.

Leave a Reply

comments

Related Articles

error: