
ಮೈಸೂರು
ಹಿಂದೂ ಧರ್ಮ ಪುನರುತ್ಥಾನ ಮಾಡಿದವರು ಶ್ರೀಶಂಕರಾಚಾರ್ಯರು : ಸಂಸದ ಪ್ರತಾಪ್ ಸಿಂಹ ಬಣ್ಣನೆ
ಮೈಸೂರು, ಆ.26:- ಇಂದು ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ಶಂಕರ ಮಠದಲ್ಲಿ ಶ್ರೀ ಶಂಕರಾಚಾರ್ಯ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾದ ತತ್ವ ಜ್ಞಾನಿಗಳ ದಿನಾಚರಣೆ ಕಾರ್ಯಕ್ರಮ ವನ್ನು ಮೈಸೂರು ಕೊಡಗು ಲೋಕಸಭಾ ಕ್ಷೇತ್ರಗಳ ಸದಸ್ಯರಾದ ಪ್ರತಾಪ ಸಿಂಹ ಉದ್ಘಾಟಿಸಿ ದರು.
ಬಳಿಕ ಮಾತನಾಡಿದ ಅವರು ಶ್ರೀ ಶಂಕರಾಚಾರ್ಯ ರು ಮೇಧಾವಿಗಳು, ತತ್ವಜ್ಞಾನಿಗಳು, ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದವರು, ಆಗಿನ ಅವನತಿ ಕಾಲದಲ್ಲಿದ್ದ ಹಿಂದೂ ಧರ್ಮವನ್ನು ಬೆಳೆಸಿದವರು, ದೇಶದ ನಾಲ್ಕು ದಿಕ್ಕು ಗಳನ್ನು ಬರೀ ಕಾಲ್ನಡಿಗೆಯಲ್ಲೇ ಸುತ್ತಿ ಹಿಂದೂ ಧರ್ಮದ ಪ್ರಚಾರ ಮಾಡಿದರು. ಕರ್ನಾಟಕ ಸೇನಾ ಪಡೆ ತತ್ವಜ್ಞಾನಿಗಳ ದಿನಾಚರಣೆ ಮಾಡಿ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅದರಲ್ಲೂ ಶಂಕರಾಚಾರ್ಯ ರ ಸನ್ನಿಧಾನದಲ್ಲಿ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಕ್ಷೇತ್ರ ದ – ಟಿ ಎಸ್ ಸುಬ್ರಹ್ಮಣ್ಯ, ವೈದ್ಯಕೀಯ ಕ್ಷೇತ್ರ ದ – ಡಾ. ಡಿ ತಿಮ್ಮಯ್ಯ, ಕನ್ನಡ ಸಂಘಟನಾ ಕ್ಷೇತ್ರ ದ – ಮಡ್ಡೀಕೆರೆ ಗೋಪಾಲ್, ಸಮಾಜ ಸೇವೆ ಕ್ಷೇತ್ರದ – ಡಾ. ರಘುರಾಂ ಕೆ ವಾಜಪೇಯಿ, ಸಹಕಾರ ಕ್ಷೇತ್ರ ದ – ಸಿ.ಜಿ ಗಂಗಾಧರ್, ಸಂಘಟನಾ ಕ್ಷೇತ್ರ ದ ಎಸ್ ಆರ್ ರವಿಕುಮಾರ್, ಬ್ಯಾಂಕಿಂಗ್ ಕ್ಷೇತ್ರದ – ಕೆ ಸುಬ್ರಹ್ಮಣ್ಯ ಅವರುಗಳಿಗೆ ” ಶ್ರೀ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿ ” ಯನ್ನು ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷರಾದ ಎನ್ ವಿ ಪಣೀಶ್ ರವರು ಪ್ರದಾನ ಮಾಡಿದರು.
ನಂತರ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ( ಅದರಲ್ಲೂ 625 ಕ್ಕೆ 625 ಅಂಕ ಪಡೆದ 4 ವಿದ್ಯಾರ್ಥಿಗಳನ್ನು ಸೇರಿ ) ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಕಾರ್ಯಕ್ರಮದ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ವನ್ನು ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೆರವೇರಿಸಿದರು. ದಿನೇಶ್ ಕೋಚಿಂಗ್ ಸೆಂಟರ್ ದಿನೇಶ್, ಮರಿಮಲ್ಲಪ್ಪ ಪ್ರೌಢ ಶಾಲೆ ಆಂಗ್ಲ ಭಾಷೆಯ ಶಿಕ್ಷಕ ಜಿ ಸಿದ್ದೇಶ್ವರ್, ಡಾ. ಶಾಂತರಾಜೇಅರಸ್, ಪ್ರಭುಶಂಕರ್, ವಿಜಯೇಂದ್ರ , ಕುಮಾರ್ ಗೌಡ, ಬಸವರಾಜು, ಚಂದ್ರ ಎಂ ಜೆ, ಸ್ವಾಮಿ, ಮಿನಿ ಬಂಗಾರಪ್ಪ, ರವಿ ನಾಯಕ್, ಗಣೇಶ್ ಪ್ರಸಾದ್, ಪ್ರಭಾಕರ್ ಮತ್ತಿತರರು ಪಾಲ್ಗೊಂಡಿದ್ದರು.