ಕರ್ನಾಟಕಪ್ರಮುಖ ಸುದ್ದಿ

ಕೊರೊನಾ ಜಾಗೃತಿ ಕುರಿತು ಜೋಗಿಪದ ಕಾರ್ಯಕ್ರಮ

ರಾಜ್ಯ( ಶಿವಮೊಗ್ಗ), ಆ. 27:- ನೆಹರು ಯುವ ಕೇಂದ್ರ ಶಿವಮೊಗ್ಗ ಮತ್ತು ಸಾಗರ ತಾಲ್ಲೂಕಿನ ಶ್ರೀ ಆನಂದೇಶ್ವರ ಕಲಾ ಸಂಘ ಇವರ ವತಿಯಿಂದ ಕೊರೊನಾ ಜಾಗೃತಿ ಕುರಿತು ಜೋಗಿ ಪದ ಕಾರ್ಯಕ್ರಮವನ್ನು ಸಾಗರದ ದೇವರಾಜ ಅರಸು ಸಭಾ ಭವನದಲ್ಲಿ ಏರ್ಪಡಿಸಲಾಗಿತ್ತು.
ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಎಂಎಸ್‍ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಡಾ.ವಾಸುದೇವ, ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಪ್ರಕಾಶ್ ಭೋಸ್ಲೆ, ಆರೋಗ್ಯ ಇಲಾಖೆ ಸಂಘದ ಜಿಲ್ಲಾಧ್ಯಕ್ಷ ಮ.ಸ,ನಂಜುಂಡಸ್ವಾಮಿ, ತಾಲ್ಲೂಕು ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ವೈ ಮೋಹನ್, ನೆಹರೂ ಯುವ ಕೇಂದ್ರದ ರಾಷ್ಟ್ರೀಯ ಯುವ ಕಾರ್ಯಕರ್ತರಾದ ಗಿರೀಶ್ ಶೇಟ್, ಪ್ರತೀಕ್ ಭಟ್, ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಶಿತಾ ಪ್ರಾರ್ಥಿಸಿದರು, ಗಿರೀಶ್ ಸ್ವಾಗತಿಸಿದರು. ಪ್ರತೀಕ್ ನಿರೂಪಿಸಿದರು. ಕಲಾವಿದರಾದ ಆಂಜನೇಯ, ಗಣಪತಿ ಶ್ರೀನಿವಾಸ, ನಾಗಪ್ಪ, ಪವನ್, ಪ್ರೇಮ್, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.(ಜಿ.ಕೆ,ಎಸ್.ಎಚ್)

Leave a Reply

comments

Related Articles

error: