ಪ್ರಮುಖ ಸುದ್ದಿಮನರಂಜನೆಮೈಸೂರು

ಒಂದು ತಿಂಗಳ ಹಿಂದೆಯೇ ಆಡಳಿತದ ವೈಫಲ್ಯದ ಬಗ್ಗೆ ಮಾತನಾಡಿದ್ದೆ : ಇಂದ್ರಜಿತ್ ಲಂಕೇಶ್

ಮೈಸೂರು,ಆ.27:- ನಾನು ಒಂದು ತಿಂಗಳ ಹಿಂದೆಯೇ ಆಡಳಿತದ ವೈಫಲ್ಯದ ಬಗ್ಗೆ ಮಾತನಾಡಿದ್ದೆ. ಇಂತಹ ಇತಿಹಾಸ ಇರುವ ಇಂತಹ ಸ್ಥಳದಲ್ಲಿ ಇಂದಿನ ಸ್ಥಿತಿ ನೋಡಿ  ಬೇಸರವಾಗುತ್ತಿದೆ ಎಂದು ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ್ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ  ಖಾಸಗಿ ಹೋಟೆಲ್ ನಲ್ಲಿಂದು ಗ್ಯಾಂಗ್ ರೇಪ್  ಹಾಗೂ ದರೋಡೆ ಪ್ರಕರಣಗಳ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರಕರಣಕ್ಕೆ ಹೊಸ ನಾಮಕಾರಣ ಮಾಡಿದರು. ನಿರ್ಭಯ ನಂತರದ ಮೈಸೂರಿನ  ಈ ಪ್ರಕರಣಕ್ಕೆ ಮಾನಿನಿ ಎಂದು ಹೆಸರಿಟ್ಟ ಅವರು ನಾನು ಒಂದು ತಿಂಗಳ ಹಿಂದೆಯೇ ಆಡಳಿತದ ದೌರ್ಬಲ್ಯದ ಬಗ್ಗೆ ಮಾತನಾಡಿದ್ದೆ. ಮೈಸೂರು ಒಂದು ಐತಿಹಾಸಿಕ ಸಾಂಸ್ಕೃತಿಕವಾದ ಸ್ಥಳ. ಕುವೆಂಪು ಅವರ ಹಲವಾರು ಸ್ಪೂರ್ತಿಗಳ ಸ್ಥಳ. ನಮ್ಮ ತಂದೆ ಇಲ್ಲಿ ವಿದ್ಯಾಭ್ಯಾಸ ಸಹ ಮಾಡಿದ್ದರು. ಇಂತಹ ಇತಿಹಾಸ ಇರುವ ಸ್ಥಳದಲ್ಲಿ  ಇಂದಿನ ಸ್ಥಿತಿ ನೋಡಿ ಬೇಸರವಾಗುತ್ತಿದೆ. ಇಂತಹ ಪ್ರಕರಣಗಳಿಂದ ಮೈಸೂರು ಡಿಸ್ಟರ್ಬ್ ಆಗಿದೆ ಎಂದರು.

ಸಂಪೂರ್ಣವಾಗಿ ಪೊಲೀಸ್ ಅಧಿಕಾರಿಗಳನ್ನು ಬ್ಲೇಮ್ ಮಾಡಲು ಸಾಧ್ಯವಿಲ್ಲ. ರಾಜಕಾರಣಿಗಳು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಹಿಂದೆ ಶಿಖಾ ಅವರು ಡಿಸಿ ಆಗಿದ್ದಾಗ ಅವರ ವಿರುದ್ಧ ರಾಜಕಾರಣಿಗಳು ಹೇಗೆ ವರ್ತನೆ ತೋರಿದ್ದರು ಎಂದು ಎಲ್ಲರಿಗೂ ಗೊತ್ತಿದೆ. ಇಂತಹ ಘಟನೆಗಳು ಹಿರಿಯ ನಾಗರಿಕರನ್ನು ಡಿಸ್ಟರ್ಬ್ ಮಾಡಿದೆ. ಇಲ್ಲಿನ ಉಸ್ತುವಾರಿ ಮಂತ್ರಿಗಳು ಯಾವ ರೀತಿ ವರ್ತನೆ ಮಾಡುತ್ತಿದ್ದಾರೆ,ಹೇಗೆ ನೆಡೆದುಕೊಳ್ಳುತ್ತಿದ್ದಾರೆ, ಯಾರು ಆಡಳಿತ ಪಕ್ಷ ,ಯಾರು ವಿರೋಧ ಪಕ್ಷ ಅಂತ ಗೊತ್ತಾಗುತ್ತಿಲ್ಲ. ರಾಜಕಾರಣಿಗಳು ಮೈಸೂರನ್ನು ತಾಲಿಬಾನ್ ಗೆ ಹೋಲಿಸುತ್ತಿರುವುದು ನೋವಿನ ಸಂಗತಿ. ಇನ್ನೂ ಕೆಲವರು ಉತ್ತರಪ್ರದೇಶಕ್ಕೆ ಹೋಲಿಸುತ್ತಿದ್ದಾರೆ. ನಿರ್ಭಯ ಪ್ರಕರಣ ನಂತರ   ಕೇಂದ್ರದಿಂದ ಒಂದು ಸಂಸ್ಥೆಯಿದೆ. ಈ ಸಂಸ್ಥೆಯಿಂದ ನೊಂದವರಿಗೆ ಸರ್ಕಾರವೇ ಹಣ ನೀಡುತ್ತದೆ. ಕರ್ನಾಟಕದಲ್ಲಿ ಅತ್ಯಾಚಾರ ಕೇಸ್ ಗೆ ಸರ್ಕಾರದಿಂದ ಹಣ ಬಂದಿಲ್ಲ. ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಅತ್ಯಾಚಾರವಾಗಿದೆ. ರಾಜ್ಯದಲ್ಲಿ ಈವರೆಗೆ ಆ ಫಂಡ್ ಬಳಕೆಯಾಗಿಲ್ಲ ಎಂದು ಕಿಡಿಕಾರಿದರು.  ಈ ಪ್ರಕರಣಕ್ಕೆ ತಾನು ಮಾನಿನಿ ಎಂದು ಹೆಸರಿಡುತ್ತೇನೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: