ಕರ್ನಾಟಕಪ್ರಮುಖ ಸುದ್ದಿಮೈಸೂರು

ಮೈಸೂರು-ಚಾಮರಾಜನಗರ ವೀಕೆಂಡ್ ಕರ್ಫ್ಯೂವನ್ನು ವಿಸ್ತರಿಸುವ ಅಗತ್ಯವಿಲ್ಲ ; ಮತ್ತೊಮ್ಮೆ ಸಿಎಂ ಜೊತೆ ಮಾತನಾಡುತ್ತೇನೆ; ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಆ.27:-  ಮೈಸೂರು-ಚಾಮರಾಜನಗರ ವೀಕೆಂಡ್ ಕರ್ಫ್ಯೂವನ್ನು ವಿಸ್ತರಿಸುವ ಅಗತ್ಯವಿಲ್ಲ ಎಂದು ಇಂದು ಮತ್ತೊಮ್ಮೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡಿ ಮನವರಿಕೆ ಮಾಡುವುದಾಗಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸಹಕಾರ ಮತ್ತು ಮೈಸೂರು- ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇಂದು ಸುತ್ತೂರು ಬಳಿ ಕಬಿನಿ ನದಿಯಿಂದ ನಂಜನಗೂಡು, ಚಾಮರಾಜನಗರ ಮತ್ತು ಯಳಂದೂರು ತಾಲೂಕಿನ 24 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಪರಿವೀಕ್ಷಣೆ ಮಾಡಿದರು. ಈ ಸಂದರ್ಭ  ಈ ವಾರವೂ ವಾರಾಂತ್ಯ ಕರ್ಫ್ಯೂ ಮುಂದುವರಿಯಲಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ     ಒಂದು ತಿಂಗಳಿನಿಂದಲೂ ಹೆಚ್ಚಿನ ಪಾಸಿಟಿವಿಟಿ ಬರುತ್ತಿಲ್ಲ. ಒಂದು ಪರ್ಸೆಂಟ್ ಇರುವುರಿಂದ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಇಂದು  ಬೆಂಗಳೂರಿಗೆ ಹೋಗುತ್ತಿದ್ದೇನೆ. ಶನಿವಾರ ಭಾನುವಾರ ವಾರಾಂತ್ಯ ಕರ್ಫ್ಯೂ ರದ್ದುಪಡಿಸುವಂತೆ ಮತ್ತೆ ಮನವಿ ಮಾಡಿಕೊಳ್ಳುತ್ತೇನೆ. ಇಂದು ದೆಹಲಿಯಿಂದ ಮುಖ್ಯಮಂತ್ರಿಗಳು ಬಂಧಿದ್ದಾರೆ.  ಕಳೆದ ವಾರ ಇದೊಂದು ವಾರ ಮುಂದುವರಿಸಿ ಅಂತ ಹೇಳಿದ್ದರು. ಅದಕ್ಕೆ ಮುಂದುವರಿಸಿದ್ದೆವು. ಇವತ್ತು ಮತ್ತೆ ಮಾತನಾಡುತ್ತೇನೆ ಎಂದರು.

ಗ್ಯಾಂಗ್ ರೇಪ್ ಪ್ರಕರಣ ಕುರಿತು ಪ್ರತಿಕ್ರಿಯಿಸಿ ಪ್ರತಾಪ್ ರೆಡ್ಡಿ ಎನ್ನುವ ಹಿರಿಯ ಅಧಿಕಾರಿಯನ್ನು ಮೊನ್ನೆನೆ ಸಿಎಂ ಮತ್ತು ಗೃಹ ಸಚಿವರು ಕಳಿಸಿದ್ದಾರೆ.  ಅವರು ಇಂಚಿಂಚು ಕೂಡ ಪರಿಶೀಲನೆ ಮಾಡುತ್ತಾರೆ.   ನಿನ್ನೆ ಸಂಜೆಯೇ ಗೃಹ ಸಚಿವರು ಬಂದಿದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇಂದು ಎಲ್ಲ ಪೊಲೀಸ್ ಉನ್ನತಾಧಿಕಾರಿಗಳ ಸಭೆ ಮಾಡುತ್ತಿದ್ದಾರೆ. ನಾನೂ ಕೂಡ ಅವರ ಗಮನಕ್ಕೆ ತಂದಿದ್ದೇನೆ. ಬಹಳ ಗಂಭೀರವಾಗಿನ ಪ್ರಕರಣವನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾರೇ ಇದ್ದರೂ ಕೂಡ ಅವರನ್ನು ಬಂಧಿಸಿ ಶಿಕ್ಷೆ ನೀಡಬೇಕು. ಸಂತ್ರಸ್ಥೆಗೆ ಚಿಕಿತ್ಸೆ ನೀಡಿ ರಕ್ಷಣೆ ನೀಡಬೇಕು ಎಂಬುದನ್ನು ಗಮನಕ್ಕೆ ತಂದಿದ್ದೇನೆ. ಮೈಸೂರಿನಲ್ಲಿಯೇ ಗೃಹ ಸಚಿವರು ಇದ್ದಾರೆ. ಸಂತ್ರಸ್ತರು ಇನ್ನೂ ಸರಿಯಾಗಿ ಸಹಕಾರ ನೀಡುತ್ತಿಲ್ಲ. ಹಾಗಂತ ಪೊಲೀಸ್ ಅಧಿಕಾರಿಗಳೇ ಹೇಳಿದ್ದಾರೆ. ಬೆಳಿಗ್ಗೆಯಿಂದ ಗೃಹ ಮಂತ್ರಿಗಳು ಎಲ್ಲಾ ಆಯಾಮಗಳಿಂದಲೂ ತನಿಖೆಗೆ ಹೇಳಿದ್ದಾರೆ. ಅವರು ಸಮರ್ಥರಿದ್ದಾರೆ. ಅವರು ಏನು ನಿರ್ಧಾರಬೇಕೋ ಅದೆಲ್ಲ ಕೈಗೊಂಡಿದ್ದಾರೆ. ಯಾರ ಬಳಿಯೂ ನಾವು ಮಾತನಾಡುವುದಿಲ್ಲವೆಂದು ಸಂತ್ರಸ್ತೆಯ ತಂದೆ ತಾಯಿ ಲಿಖಿತವಾಗಿ ನೀಡಿದ್ದಾರೆಂದು ಮಾಹಿತಿ ಇದೆ. ಯಾರನ್ನೂ ಭೇಟಿ ಮಾಡಲ್ಲ ಅಂತ ಎಂದು ತಿಳಿಸಿದರು.

ಉಮೇಶ್ ಕತ್ತಿಯವರು ಬಿಪಿಎಲ್ ಕಾರ್ಡ್ ನವರಿಗೆ 5ಕೆಜಿ ಅಕ್ಕಿ ಸಾಕು ಎಂದಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಂತ್ರಿಗಳು ಹೇಳಿದಾಕ್ಷಣ ನಡೆಯಲ್ಲ, ಕ್ಯಾಬಿನೆಟ್ ನಲ್ಲಿ ನಿರ್ಧಾರವಾಗಬೇಕಾಗಲಿದೆ ಎಂದರು.

ಈ ಸಂದರ್ಭ ಶಾಸಕರಾದ  ಎನ್. ಮಹೇಶ್, ಪುಟ್ಟರಂಗಶೆಟ್ಟಿ, ಡಾ‌. ಯತೀಂದ್ರ ಸಿದ್ದರಾಮಯ್ಯ, ನಿರಂಜನ್ ಕುಮಾರ್ ಅವರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: