ಮೈಸೂರು

ಬೆಂಕಿ ಭೂಮಿಗೆ ಸಿಲುಕಿ ಬಾಲಕ ಸಾವು ಪ್ರಕರಣ : ಮಧ್ಯಂತರ ವರದಿ ಸಲ್ಲಿಕೆ

ಶಾದನಹಳ್ಳಿ ಬೆಂಕಿ ಭೂಮಿಗೆ ಸಿಲುಕಿ ಬಾಲಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಜನ ತಜ್ಞರ ಸಮಿತಿಯಿಂದ ಮಧ್ಯಂತರ ವರದಿ ಸಲ್ಲಿಕೆಯಾಗಿದೆ.

ಜಯಪ್ರಕಾಶ್ ನೇತೃತ್ವದ ತಂಡ  ಜಿಲ್ಲಾಧಿಕಾರಿ ಡಿ.ರಂದೀಪ್ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದೆ. ವರದಿಯಲ್ಲಿ  ಶ್ಯಾದನಹಳ್ಳಿ ಬಾಲಕ ಸಾವನ್ನಪ್ಪಿದ್ದ ಸ್ಥಳದಲ್ಲಿ ಯಾವುದೇ ರಾಸಾಯನಿಕ ತ್ಯಾಜ್ಯ ಪತ್ತೆಯಾಗಿಲ್ಲ. ಯಾರೋ ಪೊದೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಬೂದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಉಲ್ಲೇಖಿಸಲಾಗಿದೆ. ಬಾಲಕ ಹರ್ಷದ್ ಸಾವಿನ  ಮರಣೋತ್ತರ ಪರೀಕ್ಷೆ  ಪೊಲೀಸ್ ತನಿಖೆ ಪೂರ್ಣಗೊಂಡ ಬಳಿಕ ಅಂತಿಮ ವರದಿ ಸಿಗಲಿದೆ ಎನ್ನಲಾಗಿದೆ.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: