ಪ್ರಮುಖ ಸುದ್ದಿಮೈಸೂರು

ಗ್ಯಾಂಗ್ ರೇಪ್ ಪ್ರಕರಣ : ತನಿಖೆ ವೇಳೆ ಪೊಲೀಸರೇ ಶಾಕ್ ಆಗುವ ವಿಚಾರ ಬಾಯ್ಬಿಟ್ಟ ಕಿರಾತಕರು

ಮೈಸೂರು,ಆ.29:- ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ರೇಪ್ ಪ್ರಕರಣ ಆರೋಪಿಗಳಿಗೆ ಇಂದು ಮೆಡಿಕಲ್ ಟೆಸ್ಟ್ ನಡೆದಿದೆ.

ಮೈಸೂರಿನ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆದಿದ್ದು, ಬಿಗಿ ಪೊಲೀಸ್ ಭದ್ರತೆಯ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇಂದು ಮಧ್ಯಾಹ್ನ ವೇಳೆಯಲ್ಲಿ ಎಲ್ಲಾ ಆರೋಪಿಗಳ ಆರೋಗ್ಯ ತಪಾಸಣೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಈಗಾಗಲೇ  ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇಂದು ಮೆಡಿಕಲ್ ಟೆಸ್ಟ್ ಮಾಡಿಸಿ ನಾಳೆ ಸ್ಥಳ ಮಹಜರು ನಡೆಸುವ  ಸಾಧ್ಯತೆ ಇದೆ ಎನ್ನಲಾಗಿದೆ.

ತನಿಖೆ ವೇಳೆ ಕಿರಾತಕರು   ಪೊಲೀಸರೆ ಶಾಕ್ ಆಗುವ ವಿಚಾರವನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಹಿಂದಿನ ಪ್ರಕರಣದಲ್ಲಿ ಪೊಲೀಸರಿಗೆ ದೂರು‌ ಕೊಡದಿರುವುದೇ ಆರೋಪಿಗಳಿಗೆ ಪ್ಲಸ್ ಪಾಯಿಂಟ್ ಆಗಿದ್ದು, ಹಿಂದೆ ಸಾಕಷ್ಟು ದರೋಡೆ ಪ್ರಕರಣಗಳನ್ನು ನಡೆಸಿದ್ದರು. ಆದರೆ ಯಾರು ಕೂಡ ಮರ್ಯಾದೆಗೆ ಅಂಜಿ ದೂರು ಕೊಡಲು‌ ಮುಂದಾಗಿಲ್ಲ. ದೂರು ಕೊಟ್ಟರೆ ಮರ್ಯಾದೆ ಹೋಗುತ್ತೆ ಎಂದು ದೂರುಗಳನ್ನೇ ನೀಡಿಲ್ಲ. ತಾವು ಮಾಡುವ ಕ್ರೈಂ ಪೊಲೀಸರಿಗೆ  ಗೊತ್ತಾಗುತ್ತಿಲ್ಲ ಎಂಬುದೇ ಇವರಿಗೆ ಪದೇ ಪದೇ ಕ್ರೈಂ ಮಾಡಲು ಪ್ರೇರಣೆಯಾಗಿತ್ತು. ಹಿಂದೆ ನಡೆದ ಪ್ರಕರಣದಲ್ಲಿ ಯಾರಾದರೂ ಒಬ್ಬರು ದೂರು ಕೊಟ್ಟಿದ್ದರೆ ಈ ರೀತಿ ಕೃತ್ಯ ನಡೆಯುತ್ತಿರಲಿಲ್ಲ‌‌‌. ಈ ಕಾರಣದಿಂದಲೇ ನಮಗೆ ಮೈಸೂರಿನ ಈ ಸ್ಥಳ ಸೇಫ್ ಎಂದು ಕೊಂಡಿದ್ದ ಕಿರಾತಕರು  ತಮಗೆ ಚಿರಪರಿಚಿತ ಚಾಮುಂಡಿ ಬೆಟ್ಟದ ಸುತ್ತಮುತ್ತ ಕೃತ್ಯ ನಡೆಸುತ್ತಿರುವುದಾಗಿ ಬಾಯ್ಬಿಟ್ಟಿದ್ದಾರೆ.

ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯಾಚರಣೆ ರೋಚಕವಾಗಿತ್ತು. ತಾಳವಾಡಿಯ ಸೂಸಿಪುರಂಗೆ ಹೋಗಿದ್ದ ಮೈಸೂರು ಪೊಲೀಸರ ತಂಡಕ್ಕೆ ಮಾಹಿತಿ‌ ಸಿಕ್ಕರೂ ಆರೋಪಿಗಳಿರುವ ಸ್ಥಳಕ್ಕೆ ಹೋಗುವುದು ಸವಾಲಾಗಿತ್ತು. ಮಾಹಿತಿ ಎಲ್ಲಾ ಪಡೆದರು ರಾತ್ರಿಯಾಗುವುದನ್ನೇ ಪೊಲೀಸರು ಕಾದಿದ್ದರು. ಸಂಜೆ ವೇಳೆಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದರು. ಕತ್ತಲಾಗುತ್ತಿದ್ದಂತೆ ಮನೆ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ   ಆರೋಪಿ ಮಲಗಿದ್ದ. ಮಲಗಿದ್ದವನ ಹೆಡೆಮುರಿ ಕಟ್ಟು ತಂದರು. ಪೊಲೀಸರಿಗೂ  ಗ್ರಾಮಸ್ಥರು ತಿರುಗಿಬೀಳುವ ಭಯ ಕಾಡಿತ್ತು. ತಮಿಳು ಭಾಷೆ ಗೊತ್ತಿರುವ ಪೊಲೀಸರನ್ನು ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: