ಕ್ರೀಡೆದೇಶಪ್ರಮುಖ ಸುದ್ದಿ

ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ

ನವದೆಹಲಿ,ಆ.30-ಟೀಂ ಇಂಡಿಯಾದ ಆಟಗಾರ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಇಂದು ಪತ್ರಿಕಾ ಪ್ರಕಟಣೆ ಮೂಲಕ ಸ್ಟುವರ್ಟ್ ಬಿನ್ನಿ ಈ ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ. ಬೆಂಗಳೂರಿನ 37 ವರ್ಷದ ಸ್ಟುವರ್ಟ್ ಬಿನ್ನಿ, ‘ನನ್ನ ಕ್ರಿಕೆಟ್ ಜೀವನದ ಪ್ರಯಾಣ ಅಭೂತಪೂರ್ವವಾಗಿತ್ತು. ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಕ್ಕೆ ಹೆಮ್ಮೆ ಇದೆ. ಇದಕ್ಕಾಗಿ ಬಿಸಿಸಿಐ, ನನ್ನ ಕುಟುಂಬ ಸೇರಿದಂತೆ ಪ್ರತಿಯೊಬ್ಬರಿಗೂ ಆಭಾರಿಯಾಗಿರುತ್ತೇನೆ’ ಎಂದು ತಿಳಿಸಿದ್ದಾರೆ.

2014 ರಲ್ಲಿ ಟೀಮ್ ಇಂಡಿಯಾ ಪ್ರವೇಶಿಸಿದ್ದ ಸ್ಟುವರ್ಟ್ ಬಿನ್ನಿ, 6 ಟೆಸ್ಟ್‌ ಪಂದ್ಯ, 14 ಏಕದಿನ ಅಂತಾರಾಷ್ಟ್ರೀಯ ಪಂದ್ಯ, 3 ಅಂತಾರಾಷ್ಟ್ರೀಯ ಟಿ20 ಪಂದ್ಯ, 150 ಐಪಿಎಲ್ ಪಂದ್ಯ ಹಾಗೂ 100 ಕ್ಕೂ ಹೆಚ್ಚು ದೇಶಿ ಕ್ರಿಕೆಟ್ ಟೂರ್ನಿಗಳನ್ನು ಆಡಿದ್ದಾರೆ. ಉತ್ತಮ ಆಲ್‌ರೌಂಡರ್ ಆಗಿದ್ದ ಇವರು ಐಪಿಎಲ್‌ನಲ್ಲಿ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡದಲ್ಲಿ ಆಡಿದ್ದಾರೆ.

ಇವರ ತಂದೆ ರೋಜರ್ ಬಿನ್ನಿ ಅವರು ಕೂಡ ಟೀಮ್ ಇಂಡಿಯಾದ ಮಾಜಿ ಆಟಗಾರರಾಗಿದ್ದರು (ಮೊದಲ ಆಂಗ್ಲೊ ಇಂಡಿಯನ್ ಆಟಗಾರ). ಅವರು ಭಾರತ 1983 ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದಾಗ ಪ್ರಮುಖ ಪಾತ್ರವಹಿಸಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: