ಮೈಸೂರು

ಜ್ಯುವೆಲ್ಲರಿ ಅಂಗಡಿ ದರೋಡೆ ಪ್ರಕರಣ : ಮತ್ತೋರ್ವನ ಬಂಧನ

ಮೈಸೂರು,ಆ.31:- ಮೈಸೂರು ವಿದ್ಯಾರಣ್ಯಪುರಂನ ಜ್ಯುವೆಲ್ಲರಿ ಅಂಗಡಿ ಯಲ್ಲಿ ಆಗಸ್ಟ್ 23ರಂದು ಸಂಜೆ ಚಿನ್ನಾ ಭರಣ ದೋಚಿ, ಗ್ರಾಹಕನೋರ್ವನನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೋರ್ವ ನನ್ನು ಮೈಸೂರು ಪೊಲೀಸರು  ರಾಜಸ್ಥಾನದಲ್ಲಿ   ಬಂಧಿಸಿದ್ದಾರೆ.

ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು  ಈಗಾಗಲೇ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ 6 ಮಂದಿಯನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಒಟ್ಟು 8 ಮಂದಿ ಭಾಗಿಯಾಗಿದ್ದು, ಉಳಿದ ಇಬ್ಬರಿಗಾಗಿ ಮೈಸೂರು ಪೊಲೀಸರು ಶೋಧ ಕಾರ್ಯ ಮುಂದುವರಿಸುತ್ತಿದ್ದರು ಎಂದು ತಿಳಿಸಿದ್ದಾರೆ.   ರಾಜಸ್ಥಾನದ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಓರ್ವನನ್ನು ಬಂಧಿಸಲಾಗಿದೆ. ಅಲ್ಲಿನ ನ್ಯಾಯಾಲಯದ ಪ್ರಕ್ರಿಯೆ ಮುಗಿಸಿ ಆರೋಪಿಯನ್ನು ಮೈಸೂರಿಗೆ ಕರೆತರಲಾಗುತ್ತಿದೆ.

ಆಗಸ್ಟ್ 23ರಂದು ಸಂಜೆ ಸುಮಾರು 5.30 ಗಂಟೆ ವೇಳೆ ಹಾಡಹಗಲೇ ಜನನಿಬಿಡ ಪ್ರದೇಶದ ಜ್ಯುವೆಲ್ಲರಿ ಅಂಗಡಿಗೆ ದಾಳಿ ಮಾಡಿ ಆಭರಣ ದೋಚಿದ್ದರು.

ಜ್ಯುವೆಲ್ಲರಿ ಮಳಿಗೆಯಲ್ಲಿ ನಡೆದ  ದರೋಡೆಗೆ ಸುಪಾರಿ ನೀಡಿದ್ದ ಆಭರಣದಂಗಡಿ ಮಾಲೀಕನನ್ನು ಬಂಧಿಸಲಾಗಿದೆ.  ಬಾಲಾಜಿ ಬ್ಯಾಂಕರ್ಸ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ದರೋಡೆಗೆ ಸುಪಾರಿ ನೀಡಿದ್ದ ಎಂಬ ಆರೋಪದಲ್ಲಿ ಮಾಲೀಕ ಮಹೇಂದ್ರನನ್ನು ವಿದ್ಯಾರಣ್ಯಪುರಂ ಪೊಲೀಸರು ಬಂಧಿಸಿದ್ದಾರೆ. ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್​ನಲ್ಲಿ ಕಳ್ಳತನವಾಗಿತ್ತು. ಇದಕ್ಕೆ ಆರೋಪಿ ಮಹೇಂದ್ರ ಎಂಬಾತ ಸುಪಾರಿ ನೀಡಿದ್ದ ಎಂದು ಹೇಳಲಾಗುತ್ತಿದೆ. ವೃತ್ತಿ ವೈಷಮ್ಯದಿಂದ ದರೋಡೆಗೆ ಸುಪಾರಿ ನೀಡಿದ್ದು, ಪ್ರಮುಖದ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಸದ್ಯ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ.

ನಾಲ್ವರು ದುಷ್ಕರ್ಮಿಗಳು ಒಳ ನುಗ್ಗಿ ಮಾಲೀಕನಿಗೆ ಥಳಿಸಿ, ಬಳಿಕ ಕೈ ಕಾಲು ಕಟ್ಟಿ ಚಿನ್ನಾಭರಣ ಲೂಟಿ ಮಾಡಿದ್ದರು. ನಂತರ ಅಂಗಡಿಯ ಬಾಗಿಲು ತೆಗೆದು ಓಡಿ ಹೋಗಿದ್ದರು. ಈ ವೇಳೆ ಅಡ್ಡ ಬಂದವರ ಮೇಲೆ ಗುಂಡು ಹಾಯಿಸಿ, ಕಿವಿ ಓಲೆ ಖರೀದಿಸಲು ಬಂದಿದ್ದ ದಡದಹಳ್ಳಿ ಚಂದ್ರು ಮೇಲೆ ಗುಂಡು ಹಾರಿಸಿದ್ದು, ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಆಗಸ್ಟ್ 23ರಂದು ಈ ಘಟನೆ ನಡೆದಿತ್ತು.   ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ನೀಡಿದವರಿಗೆ 5 ಲಕ್ಷ ರೂ.ಬಹುಮಾನ ನೀಡುವುದಾಗಿ ಮೈಸೂರು ಕಮಿಷನರ್ ಡಾ. ಚಂದ್ರಗುಪ್ತ ಘೋಷಿಸಿದ್ದರು. ತನಿಖೆಗೆ 25 ಪೊಲೀಸ್ ಅಧಿಕಾರಿಗಳ ನಿಯೋಜನೆ ಮಾಡಲಾಗಿತ್ತು. 80 ಪೊಲೀಸರು ತನಿಖೆಯಲ್ಲಿ ಭಾಗಿಯಾಗಿದ್ದರು. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳ ರಚನೆ ಮಾಡಲಾಗಿತ್ತು. ಇದರ ಜೊತೆಗೆ ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಿ, ಇಲಾಖೆಯಿಂದ ರೂ. 5 ಲಕ್ಷ ನಗದು ಬಹುಮಾನವನ್ನು ಘೋಷಿಸಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: