ಕ್ರೀಡೆದೇಶಪ್ರಮುಖ ಸುದ್ದಿ

ಪ್ರೊ.ಕಬಡ್ಡಿ ಹರಾಜು: ಪ್ರದೀಪ್‌ ನರ್ವಾಲ್‌ 1.65 ಕೋಟಿ ರೂ. ಗೆ ಮಾರಾಟ; ಇತಿಹಾಸದಲ್ಲೇ ಗರಿಷ್ಠ ಮೊತ್ತ

ನವದೆಹಲಿ,ಆ.31-ಪ್ರೊ.ಕಬಡ್ಡಿ ಲೀಗ್‌ಗೆ ಹರ್ಯಾಣದ ಪ್ರದೀಪ್‌ ನರ್ವಾಲ್‌ 1.65 ಕೋಟಿ ರೂ. ಗೆ ಮಾರಾಟವಾಗಿದ್ದು, ಇದು ಇತಿಹಾಸಲ್ಲೇ ಬೆಲೆಗೆ ಮಾರಾಟವಾದ ದಾಖಲೆ.

ಇನ್ನು ಸಿದ್ಧಾರ್ಥ್ ದೇಸಾಯಿ 1.30 ಕೋಟಿ ರೂ.ಗೆ ತೆಲುಗು ಟೈಟಾನ್ಸ್‌ ಪಾಲಾದರು. ಮಂಜೀತ್‌ (ತಮಿಳ್‌ ತಲೈವಾಸ್‌, 92 ಲ.ರೂ.), ಸಚಿನ್‌ (ಪಾಟ್ನಾ ಪೈರೇಟ್ಸ್‌, 84 ಲಕ್ಷ ರೂ.), ರೋಹಿತ್‌ ಗುಲಿಯ (ಹರ್ಯಾಣ ಸ್ಟೀಲರ್ಸ್‌, 83 ಲಕ್ಷ ರೂ.) ಗರಿಷ್ಠ ಬೆಲೆಗೆ ಮಾರಾಟವಾದ ಇತರೆ ಆಟಗಾರರು.

ಇನ್ನು ಕರ್ನಾಟಕದ ಖ್ಯಾತ ರೈಡರ್‌ ಪ್ರಶಾಂತ್‌ ಕುಮಾರ್‌ ರೈ ಪಾಟ್ನಾ ಪೈರೇಟ್ಸ್‌ ತಂಡಕ್ಕೆ ಮಾರಾಟವಾದರು. ಇವರ ಪಡೆದ ಮೊತ್ತ 55 ಲಕ್ಷ ರೂ. ಗರಿಷ್ಠ ಬೆಲೆ ಪಡೆದವರ ಪಟ್ಟಿಯಲ್ಲಿ ಇವರು ಜಂಟಿ 14ನೇ ಸ್ಥಾನ ಪಡೆದಿದ್ದಾರೆ.

ವಿದೇಶೀಯರ ಪೈಕಿ ಮೊಹಮ್ಮದ್‌ ರೆಝಾಗೆ 31 ಲಕ್ಷ ರೂ.: ಸೋಮವಾರ ನಡೆದ ಹರಾಜಿನಲ್ಲಿ ಐದು ಮಂದಿ ವಿದೇಶಿ ಆಟಗಾರರು ಗರಿಷ್ಠ ಬೆಲೆಗೆ ಮಾರಾಟವಾಗಿದ್ದಾರೆ. ಇರಾನಿನ ಆಲ್‌ರೌಂಡರ್‌ ಮೊಹಮ್ಮದ್‌ ರೆಝಾಚಿಯನೆಹ್‌ (31ಲಕ್ಷ ರೂ., ಪಾಟ್ನಾ ಪೈರೇಟ್ಸ್‌), ಅಬೋಝರ್‌ ಮಿಘಾನಿ (30.50ಲಕ್ಷ ರೂ., ಬೆಂಗಾಲ್‌ ವಾರಿಯರ್ಸ್‌), ದ.ಕೊರಿಯದ ಜಾಂಗ್‌ಕುನ್‌ಲೀ(20.50ಲಕ್ಷ ರೂ., ಪಾಟ್ನಾ ಪೈರೇಟ್ಸ್‌), ಇರಾನಿನ ಹದಿಒಷ್ಟೊರಾಕ್‌ (20 ಲಕ್ಷ ರೂ., ಗುಜರಾತ್‌ ಜೈಂಟ್ಸ್‌), -ಮೊಹಮ್ಮದ್‌ ಮಘ್ ಸೊಡೊ (13.20ಲಕ್ಷ ರೂ., ಹರ್ಯಾಣ ಸ್ಟೀಲರ್ಸ್‌) ಈ ಆಟಗಾರರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: