ಕ್ರೀಡೆಪ್ರಮುಖ ಸುದ್ದಿವಿದೇಶ

ಪ್ಯಾರಾಲಿಂಪಿಕ್ಸ್: ಪುರುಷರ 10 ಮೀ. ಏರ್ ಪಿಸ್ತೂಲ್ ಎಸ್‌ಎಚ್ 1 ಫೈನಲ್‌ನಲ್ಲಿ ಭಾರತದ ಸಿಂಗರಾಜ್ ಅಧಾನಗೆ ಕಂಚು

ಟೋಕಿಯೊ,ಆ.31-ಇಲ್ಲಿ ನಡೆಯುತ್ತಿರುವ ಪಾರಾಲಂಪಿಕ್ಸ್ ನಲ್ಲಿ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ ಎಚ್ 1 ಪಂದ್ಯದಲ್ಲಿ ಭಾರತದ ಶೂಟರ್ ಸಿಂಗರಾಜ್ ಅಧಾನ್ ಕಂಚಿನ ಪದಕ ಜಯಿಸಿದ್ದಾರೆ.

ಸಿಂಗರಾಜ್ ಅಧಾನ್ ಅವರು ಒಟ್ಟು 216.8 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಭಾರತದ ಪದಕ ಬೇಟಿ 8ಕ್ಕೆ ತಲುಪಿದೆ. ಇನ್ನು ಚೀನಾ ದೇಶದ ಹೌಂಗ್ ಕ್ಸಿಂಗ್ ಮತ್ತು ಯಾಂಗ್ ಚಾವ್ ಅವರು ಬೆಳ್ಳಿ ಮತ್ತು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಸಿಂಗ್ ರಾಜ್ ಅಧಾನ ಅವರು ಅದ್ಭುತ ಪ್ರದರ್ಶನ ತೋರಿಸಿದ್ದಾರೆ. ಭಾರತದ ಪ್ರತಿಭಾವಂತ ಶೂಟರ್ ದೇಶಕ್ಕೆ ಕಂಚಿನ ಪದಕವನ್ನು ತಂದು ಕೀರ್ತಿ ತಂದಿದ್ದಾರೆ. ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: