ಮೈಸೂರು

ಯಾವುದೇ ಕಾರಣಕ್ಕೂ ಕೆ.ಆರ್‌.ನಗರ ಕ್ಷೇತ್ರ ಬಿಟ್ಟುಕೊಡಲ್ಲ : ಕಾಂಗ್ರೆಸ್ ಮುಖಂಡ ರವಿಶಂಕರ್ ಆಡಿಯೋ ಸಂಭಾಷಣೆ ವೈರಲ್

ಮೈಸೂರು,ಆ.31:-  ಕಾಂಗ್ರೆಸ್ ಸೇರಲು ಶಾಸಕ ಜಿ.ಟಿ.ದೇವೇಗೌಡರು ಹಲವು ಷರತ್ತುಗಳನ್ನು ವಿಧಿಸಿದ್ದಾರೆ ಎನ್ನಲಾಗಿದ್ದು, ಈ ಕುರಿತು ಕೆ.ಆರ್ ನಗರದ ಕಾಂಗ್ರೆಸ್ ಮುಖಂಡ ರವಿಶಂಕರ್  ಯಾವುದೇ ಕಾರಣಕ್ಕೂ ಕೆ.ಆರ್‌.ನಗರ ಕ್ಷೇತ್ರ ಬಿಟ್ಟುಕೊಡಲ್ಲ ಎಂದಿರುವ ಆಡಿಯೋ ಸಂಭಾಷಣೆಯು ವೈರಲ್ ಆಗಿ ಸಖತ್  ಸದ್ದು ಮಾಡುತ್ತಿದೆ.

ನನ್ನ ಪುತ್ರನಿಗೆ ಮೈಸೂರು ಭಾಗದ ಮೂರರಲ್ಲಿ ಒಂದು ಕ್ಷೇತ್ರದಲ್ಲಿ ಎಂಎಲ್‌ಎ ಟಿಕೆಟ್‌ ಕೊಟ್ಟರೆ ಕಾಂಗ್ರೆಸ್‌ ಸೇರುತ್ತೇನೆ ಎಂದಿರುವ  ಶಾಸಕ ಜಿ.ಟಿ.ದೇವೇಗೌಡರ ಷರತ್ತು ಹಲವರು ಕಾಂಗ್ರೆಸ್‌ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.  ಕೆ.ಆರ್.ನಗರ ಕಾಂಗ್ರೆಸ್‌ ಮುಖಂಡ ರವಿಶಂಕರ್‌  ಯಾವುದೇ ಕಾರಣಕ್ಕೂ ಕೆ.ಆರ್‌.ನಗರ ಕ್ಷೇತ್ರ ಬಿಟ್ಟುಕೊಡಲ್ಲ. ನನಗಿರುವುದು ಒಂದೇ ಕನಸು ಎಂಎಲ್‌ಎ ಆಗಬೇಕು. ನಾನು 15 ವರ್ಷ ಇಡೀ ಜೀವನವನ್ನು ರಾಜಕೀಯಕ್ಕಾಗಿ ತ್ಯಾಗ ಮಾಡಿದ್ದೇನೆ.  ನಾನು ಎಂಎಲ್‌ಎ ಆಗಬೇಕು, ಆಗೇ ಆಗುತ್ತೇನೆ. ನಾನು ಸಿದ್ದರಾಮಯ್ಯ ಅವರನ್ನು ಒಪ್ಪಿಸುತ್ತೇನೆ. ಪಕ್ಷಕ್ಕೆ ನನ್ನ ಪರಿಶ್ರಮ ಏನೆಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತು. ನನ್ನ ನೋವು ಅವರಿಗೆ ಗೊತ್ತು. ನಾನು ಅವರನ್ನು ಒಪ್ಪಿಸುತ್ತೇನೆ. ಅವರು ನನ್ನನ್ನು ಬಿಟ್ಟು ಕನ್ಫರ್ಮ್‌ ಮಾಡಲು ಆಗಲ್ಲ.

ರಾಜಕೀಯದಲ್ಲಿ ನಾನು ಮುಂದುವರಿಯಬೇಕು ಎಂಬುದು ನಮ್ಮ ತಂದೆಯವರ ಕನಸು. ಜಿಲ್ಲಾ ಪಂಚಾಯಿತಿ ಸದಸ್ಯನಾದ ನಂತರ ರಾಜಕೀಯ ಸಾಕು ಎಂದುಕೊಂಡಿದ್ದೆ. ಆದರೆ ನೀನು ರಾಜಕೀಯದಲ್ಲಿ ಇರಬೇಕು ಎಂದು ನಮ್ಮ ತಂದೆ ಹೇಳಿದರು. ಮತದಾರರೂ ಪ್ರಾಮಾಣಿಕವಾಗಿದ್ದು, ನನ್ನ ಪರವಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ನಾನು ಎಂಎಲ್‌ಎ ಸರಿಸಮಾನವಾಗಿ ವೋಟು ತೆಗೆದುಕೊಂಡಿದ್ದೇನೆ. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಕೂಗಿತ್ತು, ಎಚ್‌.ಡಿ.ಕುಮಾರಸ್ವಾಮಿ ಪರ್ವ ಇತ್ತು. ಅವರನ್ನೇ ಸಿಎಂ ಮಾಡಬೇಕೆಂಬ ಹಠ ಇತ್ತು. ದಲಿತ ಮುಖ್ಯಮಂತ್ರಿ ಮಾಡಿಲ್ಲ ಎಂಬ ಕೂಗು, ವೀರಶೈವ-ಲಿಂಗಾಯತ ಕೂಗಿತ್ತು. ಈ ಎಲ್ಲಾ ಕಾರಣಗಳಿಂದ ಸ್ವಲ್ಪ ಅಂತರದಲ್ಲಿ ನನಗೆ ಸೋಲಾಗಿದೆ. ಮುಂದಿನ 2023ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದಿರುವ ಆಡಿಯೋ ವೈರಲ್ ಆಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: