Uncategorized

ಅಕ್ರಮವಾಗಿ ಪಾಕ್ ಪ್ರವೇಶ: 8 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಇಬ್ಬರು ಭಾರತೀಯರ ಬಿಡುಗಡೆ; ಹಸ್ತಾಂತರ

ಲಾಹೋರ್,ಆ.31-ಅಕ್ರಮವಾಗಿ ಪಾಕಿಸ್ತಾನ ಪ್ರವೇಶಿಸಿದ್ದಕ್ಕಾಗಿ 8 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಭಾರತೀಯರನ್ನು ಪಾಕಿಸ್ತಾನವು ಭಾರತದ ಗಡಿ ಭದ್ರತಾ ಪಡೆಗೆ ಹಸ್ತಾಂತರಿಸಿದೆ.

ನಿನ್ನೆ ಅಠಾರಿ-ವಾಘಾಗಡಿ ಮೂಲಕ ಭದ್ರತಾ ಪಡೆಗಳಿಗೆ ಹಸ್ತಾಂತರಿಸಿದ್ದಾರೆಂದು ತಿಳಿದುಬಂದಿದೆ. ಶರ್ಮಾ ರಜ‍ಪೂತ್‌ ಮತ್ತು ರಾಮ್‌ ಬುಹಾದಾರ್‌ ಎಂಬವರು 2013ರಲ್ಲಿ ಕಾಶ್ಮೀರದ ಎಲ್‌ಒಸಿ ಮೂಲಕ ಪಾಕಿಸ್ತಾನವನ್ನು ಪ್ರವೇಶಿಸಿದ್ದರು. ಅವರನ್ನು ಪಾಕಿಸ್ತಾನ ರೇಜಂರ್ಸ್‌ ಬಂಧಿಸಿದ್ದರು. ಈ ಇಬ್ಬರು ಭಾರತೀಯರು ಬುದ್ದಿಮಾಂದ್ಯರಾಗಿದ್ದು, ಅಜಾಗರೂಕತೆಯಿಂದ ಗಡಿಯನ್ನು ದಾಟಿದ್ದಾರೆ ಎಂಬುದು ನಂತರದಲ್ಲಿ ತನಿಖೆ ವೇಳೆ ತಿಳಿದುಬಂದಿದೆ.

ಅವರಿಬ್ಬರ ಫೋಟೋಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲಾಗಿತ್ತು. ಭಾರತವು ಅವರ ಗುರುತನ್ನು ದೃಢೀಕರಿಸಿದ ಬಳಿಕ ಪಾಕಿಸ್ತಾನ ಸರ್ಕಾರವು ಸೋಮವಾರ ಅವರಿಬ್ಬರನ್ನು ವಾಘಾ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಿತು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದ ವರ್ಷ ಗೂಢಚಾರ್ಯೆ ಮತ್ತು ಅಕ್ರಮ ಗಡಿ ಪ್ರವೇಶ ಆರೋಪದಡಿ 19 ಭಾರತೀಯರನ್ನು ಪಾಕಿಸ್ತಾನಿ ಅಧಿಕಾರಿಗಳು ಬಂಧಿಸಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: