ಪ್ರಮುಖ ಸುದ್ದಿಮೈಸೂರು

ಗೃಹ ಸಚಿವರಿಗೆ ಗಂಭೀರತೆಯಿಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು,ಸೆ.1:- ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಸ್ಥಳಕ್ಕೆ ಇಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಕರಣದ ಕುರಿತು ಗೃಹ ಸಚಿವರಿಗೆ ಗಂಭೀರತೆಯಿಲ್ಲ. ಘಟನಾ ಸ್ಥಳಕ್ಕೆ ತೆರಳಿದ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರು ಚೈಲ್ಡೀಶ್, ಬೇಜವಾಬ್ದಾರಿಯಾಗಿ ಯುವತಿ ಆ ಸಮಯದಲ್ಲಿ ಯಾಕೆ ಹೋಗಬೇಕಿತ್ತು ಅಂತಾರೆ. ಇವರು ರಾಜ್ಯದ ಗೃಹ ಮಂತ್ರಿ ಆಗುವುದಕ್ಕೆ ಅರ್ಹರಾ? ರಾಜ್ಯ ಸರ್ಕಾರ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಈ ಕೂಡಲೇ ಗೃಹ ಸಚಿವರು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಈ ಪ್ರಕರಣವನ್ನು ಸರ್ಕಾರ ಲಘುವಾಗಿ ಪರಿಗಣಿಸಿದೆ. ಇಂತಹ ಹಲವಾರು ಪ್ರಕರಣಗಳು ನಡೆದಿದ್ದರೂ ರಾಜ್ಯ ಸರ್ಕಾರ ಪ್ರಕರಣ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪೊಲೀಸರಿಗೆ ಅಭಿನಂದನೆಗಳನ್ನು ಹೇಳಿದ್ದೇ ಹೇಳಿದ್ದು, ಪೊಲೀಸರು ಸಾಮೂಹಿಕ ಅತ್ಯಾಚಾರ ತಡೆದಿದ್ದರೆ ಹೊಗಳಬಹುದಿತ್ತು. ಅಪರಾಧಗಳನ್ನು ತಡೆಗಟ್ಟಿದರೆ ಮಾತ್ರ ಬೆನ್ನು ತಟ್ಟಬೇಕು. ಇದು ಮೈಸೂರಿಗೆ ಕಪ್ಪು ಚುಕ್ಕೆ ಅಲ್ಲವಾ? ಎಂದು ಅವರು ಪ್ರಶ್ನಿಸಿದರು. ಈ ಪ್ರಕರಣದಿಂದಲೇ ರಾಜ್ಯ ಸರ್ಕಾರ ವಿಫಲವಾಗಿರುವುದು ತಿಳಿಯುತ್ತದೆ ಎಂದರು.

ಸಾರ್ವಜನಿಕರು ರಾತ್ರಿ ವೇಳೆ ಓಡಾಡದಂತಹ ಜಾಗ ಅದು. ಘಟನೆ 8 ದಿನವಾದರೂ ಯಾವ ವ್ಯಾಪ್ತಿಗೆ ಬರುತ್ತೆಂದು ಅಧಿಕಾರಿಗಳಿಗೆ ಗೊತ್ತಿಲ್ಲ. ನಗರಾಭಿವೃದ್ಧಿ ವ್ಯಾಪ್ತಿಗೆ ಸೇರುತ್ತಾ ಅರಣ್ಯ ಇಲಾಖೆಗೆ ಸೇರುತ್ತಾ? ಘಟನೆ ನಡೆದು 8 ದಿನವಾದರೂ ಇದಕ್ಕೆ ಉತ್ತರ ಸಿಕ್ಕಿಲ್ಲ. ಪ್ರಕರಣದ ಆರೋಪಿಗಳ ಮೇಲೆ ಹಲವಾರು ಪ್ರಕರಣಗಳಿವೆ. ಆರೋಪಿಗಳು ಆಗಾಗ ಇಲ್ಲಿಗೆ ಬಂದು ಕಾನೂನು ಬಾಹಿರ ಕೃತ್ಯವೆಸಗುತ್ತಿದ್ದರು. ಸಂತ್ರಸ್ತೆ ಡಿಸ್ಚಾರ್ಜ್ ವೇಳೆ ಪೊಲೀಸ್ ಅಧಿಕಾರಿಗಳಿರಬೇಕಿತ್ತು. ಸಂತ್ರಸ್ತೆ ಹೇಳಿಕೆ ನೀಡುವುದಿಲ್ಲ ಅಂದರೆ ಪೊಲೀಸರ ಕೆಲಸವೇನು? ಸಂತ್ರಸ್ತೆಯ ಮನವೊಲಿಸಿ ಹೇಳಿಕೆಯನ್ನು ಪಡೆಯಬೇಕಿತ್ತು. ಪೊಲೀಸರು ಸಂತ್ರಸ್ತೆ ಹೇಳಿಕೆ ಪಡೆಯದಿದ್ದರಿಂದ ಅನುಮಾನ ಹುಟ್ಟಿಕೊಂಡಿದೆ. ಇದರಿಂದ ಪೊಲೀಸರ ವೈಫಲ್ಯ ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಪೊಲೀಸರ ವಿರುದ್ಧವೂ ಹರಿಹಾಯ್ದರು.
ಈ ಸರಕಾರದಲ್ಲಿ ಪೊಲೀಸ್ ವರ್ಗಾವಣೆಗಳು ದುಡ್ಡಿಂದ ಆಗಿವೆ. ಎಷ್ಟೆಷ್ಟು ದುಡ್ಡು ಕೊಟ್ಟು ಬಂದಿದ್ದಾರೆ ಎಂದು ವೀಡಿಯೋ ಮಾಡಿ ತೋರಿಸಲ? ಪೊಲೀಸರಿಗೆ ತನಿಖೆಯ ಸ್ವಾತಂತ್ರ್ಯ ಇಲ್ಲ. ಪೊಲೀಸರು ಉದ್ದೇಶ ಪೂರ್ವಕವಾಗಿ ಸಂತ್ರಸ್ತೆ ಹೇಳಿಕೆ ಪಡೆದಿಲ್ಲ ಎಂದೆನಿಸುತ್ತಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: