ಮೈಸೂರು

ಮಾಜಿ ಸಚಿವ ವಿನಯ್ ಕುಲಕರ್ಣಿ ಸುತ್ತೂರು ಮಠಕ್ಕೆ ಭೇಟಿ

ಮೈಸೂರು,ಸೆ.1:- ಮಾಜಿ ಸಚಿವ,ಕಾಂಗ್ರೆಸ್ ಪಕ್ಷದ ಯುವನಾಯಕ ವಿನಯ್ ಕುಲಕರ್ಣಿ ಮೈಸೂರಿನ ಸುತ್ತೂರು ಶ್ರೀ ಮಠಕ್ಕೆ ಆಗಮಿಸಿ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ಇದೇ ವೇಳೆ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನಾಡನಹಳ್ಳಿ ರವಿ,ವಿಶ್ವ,ಎಸ್ ಆರ್ ರವಿ, ಲೋಕೇಶ್ ಕುಮಾರ್ ಮಾದಾಪುರ,ನಜರಾಬಾದ್ ನಟರಾಜು,ಪೈಲ್ವಾನ್ ಆರ್ ಕೆ ರವಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: