
ಮೈಸೂರು
ಕುದೇರು ಮಠಕ್ಕೆ ಮೇಯರ್ ಸುನಂದಾ ಪಾಲನೇತ್ರ ಭೇಟಿ
ಮೈಸೂರು,ಸೆ.2:- ಇಂದು ಮೈಸೂರಿನ ಹೃದಯ ಭಾಗದಲ್ಲಿರುವ ಬಸವೇಶ್ವರ ರಸ್ತೆಯಲ್ಲಿರುವ ಕುದೇರು ಮಠಕ್ಕೆ ಮೈಸೂರು ಮಹಾಪೌರರಾದ ಸುನಂದಾ ಪಾಲನೇತ್ರ ಅವರು ಭೇಟಿ ನೀಡಿ ನೀಡಿದರು.
ಶ್ರೀಗುರುಶಾಂತ ಸ್ವಾಮೀಜಿಗಳು ಹಾಗೂ ಕಿರಿಯ ಶ್ರೀಗಳಾದ ಇಮ್ಮಡಿ ಗುರುಲಿಂಗ ಸ್ವಾಮಿಗಳವರ ದಿವ್ಯ ಆಶೀರ್ವಾದಗಳನ್ನು ಪಡೆದರು. ಈ ಸಂದರ್ಭದಲ್ಲಿ ಮೂಡಾ ಅಧ್ಯಕ್ಷರಾದ ರಾಜೀವ್ ಮತ್ತು ನಗರ ಪಾಲಿಕೆ ಸದಸ್ಯರುಗಳಾದ ಬಿ ವಿ ಮಂಜುನಾಥ್ . ಸೌಮ್ಯ ಉಮೇಶ್, ಮಾಜಿ ಸದಸ್ಯರಾದ ಸುನಿಲ್ ಕುಮಾರ್, ಮೈಸೂರು ಜಿಲ್ಲಾ ವೀರಶೈವ ಘಟಕದ ಅಧ್ಯಕ್ಷರಾದ ಕಾನ್ಯ ಶಿವಮೂರ್ತಿ,ಯುವ ಮುಖಂಡರಾದ ಮಹೇಂದ್ರ ಶೈವ ಹಾಗೂ ಗುರುಮಲ್ಲೇಶ್ವರ ಭಕ್ತಾದಿಗಳು ಮತ್ತು ವೀರಶೈವ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)