ಪ್ರಮುಖ ಸುದ್ದಿವಿದೇಶ

ಅಫ್ಘಾನಿಸ್ತಾನದಲ್ಲಿ ತಿಂಗಳಾಂತ್ಯಕ್ಕೆ ಆಹಾರ ಸಮಸ್ಯೆ: ವಿಶ್ವಸಂಸ್ಥೆ ಕಳವಳ

ನ್ಯೂಯಾರ್ಕ್,ಸೆ.2-ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ಸಂಗ್ರಹ ಮಾಡಿರುವ ಆಹಾರ ಈ ತಿಂಗಳಾಂತ್ಯಕ್ಕೆ ಮುಗಿಯಲಿದ್ದು, ಆಹಾರ ಸಮಸ್ಯೆ ತಲೆದೋರಲಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ವಿಶೇಷ ಪ್ರತಿನಿಧಿ ರಮೀಜ್‌ ಅಲಕ್‌ ಬರೋವ್‌ ಈ ಎಚ್ಚರಿಕೆ ನೀಡಿದ್ದು, ಸಂಕಷ್ಟಕ್ಕೆ ಸಿಲುಕಿರುವ ಪ್ರಜೆಗಳಿಗೆ ಆಹಾರ ಪೂರೈಸಲು 1,461 ಕೋಟಿ ರೂ. ಅಗತ್ಯವಿದೆ ಎಂದು ಹೇಳಿದ್ದಾರೆ.

‘ಆಹಾರದ ಕೊರತೆ ಎಷ್ಟಿದೆ ಎಂದರೆ, ದೇಶದ ಜನಸಂಖ್ಯೆಯ ಮೂರನೇ ಒಂದರಷ್ಟು ಜನರಿಗೆ ಒಂದು ಹೊತ್ತಿನ ಊಟ ಸಿಗುತ್ತದೆಯೋ ಇಲ್ಲವೋ ಎಂಬ ಖಾತರಿ ಇಲ್ಲದಂತಾಗಿದೆ’ ಎಂದು ಅವರು ಕಾಬೂಲ್‌ನಲ್ಲಿ ನಡೆಸಿದ ವರ್ಚುವಲ್‌ ಪತ್ರಿಕಾಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

‘ಮಕ್ಕಳು ಹೆಚ್ಚು ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲೂ ಐದು ವರ್ಷದೊಳಗಿನ ಮಕ್ಕಳು ವಿಪರೀತ ಅಪೌಷ್ಟಿಕತೆಯಂದ ಬಳಲುತ್ತಿದ್ದು, ಆಹಾರದ ದಾಸ್ತಾನು ಕೊನೆಗೊಂಡರೆ ಈ ಮಕ್ಕಳಿಗೆ ಮತ್ತಷ್ಟು ತೊಂದರೆಯಾಗಲಿದೆ’ ಎಂದು ಹೇಳಿದ್ದಾರೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: