ಮೈಸೂರು

ನಾಳೆ ಪಾಲಿಕೆಯ 36ನೇ ವಾರ್ಡ್ ಗೆ ಉಪಚುನಾವಣೆ ಹಿನ್ನೆಲೆ : ಮಸ್ಟರಿಂಗ್ ಕಾರ್ಯ; ಮತಗಟ್ಟೆಗಳಲ್ಲಿ ಪೊಲೀಸ್ ಭದ್ರತೆ

ಮೈಸೂರು,ಸೆ.2:- ನಾಳೆ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 36ಕ್ಕೆ ಉಪಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಇಂದು ಮಸ್ಟರಿಂಗ್ ಕಾರ್ಯ ಆರಂಭವಾಗಿದೆ. ಮತಗಟ್ಟೆಗಳಲ್ಲಿ ಈಗಾಗಲೇ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಚುನಾವಣಾ ಅಧಿಕಾರಿ ಕಾರ್ತೀಕ ನೇತೃತ್ವದಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದೆ. ಮೈಸೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ ನಡೆಯುತ್ತಿದೆ. ಮತಗಟ್ಟೆ, ಅಧಿಕಾರಿಗಳು, ಸಹಾಯಕ ಅಧಿಕಾರಿಗಳು,  ಮೊದಲನೆ-ಎರಡನೇ ಪೊಲಿಂಗ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ನಾಳೆ ಬೆಳಿಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯವರೆಗೆ ಮತದಾನ ನಡೆಯಲಿದೆ. 6ನೇ ತಾರೀಖು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿಯಿಂದ ಶೋಭಾ, ಜೆಡಿಎಸ್ ನಿಂದ ಲೀಲಾವತಿ, ಕಾಂಗ್ರೆಸ್ ನಿಂದ ರಜನಿ ಅಣ್ಣಯ್ಯ ಕಣದಲ್ಲಿದ್ದಾರೆ.

ಈ ಕುರಿತು ಚುನಾವಣಾಧಿಕಾರಿ ಕಾರ್ತಿಕ್ ಪ್ರತಿಕ್ರಿಯಿಸಿ ಮಸ್ಟರಿಂಗ್ ಕಾರ್ಯ ಬೆಳಿಗ್ಗೆ 8ಗಂಟೆಯಿಂದಲೇ ಆರಂಭವಾಗಿದೆ.   11ಮತಗಟ್ಟೆಗಳಿಗೆ ಈಗ ಇವಿಎಂ ಮಶಿನ್ ಗಳು ಹೋಗಲಿದೆ. ಅಲ್ಲಿ ಬೆಳಿಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಲಿದೆ.  11ತಂಡವಿದೆ. ಒಂದು ರಿಸರ್ವ ತಂಡವಿದೆ. ಮತಗಟ್ಟೆ ಅಧಿಕಾರಿಗಳು ಅಲ್ಲಿ ಹೋಗುತ್ತಾರೆ. ಮೌಲಾನಾ ಆಜಾದ್ ಸ್ಕೂಲ್, ವಿಜಯ ಕಾನ್ವೆಂಟ್  ಸ್ಕೂಲ್, ಸರ್ಕಾರಿ ಶಾಲೆಯ 11ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಎಲ್ಲರೀತಿಯಿಂದಲೂ ಚೆಕ್ಕಿಂಗ್ ಮಾಡಲಾಗುತ್ತಿದೆ. ಪೊಲೀಸ್ ಭದ್ರತೆ ಇದೆ ಎಂದು ತಿಳಿಸಿದರು.

ವಾರ್ಡ್  ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಸೆ.6 ರಂದು ಬೆಳಗ್ಗೆ 8ಕ್ಕೆ ಮಹರಾಜ ಸಂಸ್ಕೃತ ಪಾಠಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ.  ಒಟ್ಟು 11 ಮತಗಟ್ಟೆಗಳಿವೆ.  10,656 ಮಂದಿ ಮತದಾರರಿದ್ದು ಈ ಪೈಕಿ 5628 ಪುರುಷರು, 5385 ಮಹಿಳೆಯರು ಹಾಗೂ 3 ಮಂದಿ ಇತರರಿದ್ದಾರೆ.

ಸೋಂಕಿತರು ಸಂಜೆ 5 ರಿಂದ 6ರ ನಡವೆ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಈಗಾಗಲೇ ತಿಳಿಸಿದ್ದಾರೆ. ಯರಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದು ಮತಗಟ್ಟೆಗಳಿದ್ದು, ಅಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: