ಮೈಸೂರು

ಗಾಯಾಳು ಯೋಧ ರಮೇಶ್ ನಿವಾಸಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ

ಜಮ್ಮು-ಕಾಶ್ಮೀರದ ಕುಪ್ವಾರಾದಲ್ಲಿ ಕಳೆದ ಬುಧವಾರ (ಏ.26)ಉಗ್ರಗಾಮಿಗಳ ಬೇಟೆ ವೇಳೆ ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಭದ್ರೆಗೌಡನ ಕೊಪ್ಪಲಿನ ಯೋಧ ಬಿ. ರಮೇಶ್  ಗಾಯಗೊಂಡಿದ್ದರು. ರಮೇಶ್ ಅವರ ಇಲವಾಲದಲ್ಲಿನ ನಿವಾಸಕ್ಕೆ ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದರು.

ಯೋಧ ಬಿ.ರಮೇಶ್ ಅವರಿಗೆ ಶ್ರೀನಗರದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಈಗಾಗಲೇ ಚಿಕಿತ್ಸೆಗೆ ಅವರು  ಸ್ಪಂದಿಸಿದ್ದಾರೆ.  ಈ ಸಂಬಂಧವಾಗಿ ಸೋಮವಾರ ಯೋಧನ ಕುಟುಂಬಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು. ಅವರು ಆದಷ್ಟು ಶೀಘ್ರ ಗುಣಮುಖರಾಗುತ್ತಾರೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ ಎನ್ನಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: