ದೇಶಪ್ರಮುಖ ಸುದ್ದಿ

ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 45ಸಾವಿರಕ್ಕಿಂತ ಹೆಚ್ಚು ಕೊರೋನಾ ಪ್ರಕರಣ ಪತ್ತೆ

ದೇಶ(ನವದೆಹಲಿ)ಸೆ.3:- ಭಾರತದಲ್ಲಿ ಪ್ರತಿದಿನ ಸುಮಾರು 45 ಸಾವಿರ ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ.

ಇತ್ತೀಚಿನ ಡೇಟಾವನ್ನು ಆರೋಗ್ಯ ಸಚಿವಾಲಯ ಶುಕ್ರವಾರ ಬೆಳಿಗ್ಗೆ ಬಿಡುಗಡೆ ಮಾಡಿದೆ. ಸಚಿವಾಲಯದ ಪ್ರಕಾರ  ಕಳೆದ 24 ಗಂಟೆಗಳಲ್ಲಿ 45,352 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದಕ್ಕೂ ಒಂದು ದಿನ ಮೊದಲು 47,092 ಪ್ರಕರಣಗಳು ಪತ್ತೆಯಾಗಿತ್ತು. ಅದೇ ವೇಳೆ ಕಳೆದ 24 ಗಂಟೆಗಳಲ್ಲಿ 366 ಕೊರೋನಾ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. 34,791 ಜನರು ಕೊರೋನಾದಿಂದ ಗುಣಮುಖರಾಗಿದ್ದಾರೆ. 10,195 ಸಕ್ರಿಯ ಪ್ರಕರಣಗಳು ಹೆಚ್ಚಾಗಿದೆ.

ಈಗ ದೇಶದಲ್ಲಿ ಚೇತರಿಕೆಗಿಂತ ಹೆಚ್ಚು ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ.  ಇದರಿಂದಾಗಿ ಸಕ್ರಿಯ ಪ್ರಕರಣಗಳು ಹೆಚ್ಚುತ್ತಿವೆ. ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ ನಾಲ್ಕು ಲಕ್ಷಕ್ಕೆ ಏರಿಕೆಯಾಗಿದೆ. ಈ ಸಂದರ್ಭದಲ್ಲಿ, ಭಾರತ ಈಗ ಏಳನೇ ಸ್ಥಾನಕ್ಕೆ ಏರಿದೆ.

ಕೊರೋನಾ ಸಾಂಕ್ರಾಮಿಕದ ಆರಂಭದಿಂದ  ಒಟ್ಟು ಮೂರು ಕೋಟಿ 29 ಲಕ್ಷ 3 ಸಾವಿರ ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ 4 ಲಕ್ಷ 39 ಸಾವಿರದ 895 ಜನರು ಸಾವನ್ನಪ್ಪಿದ್ದಾರೆ.   ಇದುವರೆಗೆ 3 ಕೋಟಿ 20 ಲಕ್ಷ 63 ಸಾವಿರ ಜನರು ಗುಣಮುಖರಾಗಿದ್ದಾರೆ. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷ.  ಒಟ್ಟು 3 ಲಕ್ಷದ 99 ಸಾವಿರದ 778 ಜನರು ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೋನಾದ ಒಟ್ಟು ಪ್ರಕರಣಗಳು – ಮೂರು ಕೋಟಿ 29 ಲಕ್ಷ 3 ಸಾವಿರದ 289, ಒಟ್ಟು ಗುಣಮುಖರಾದವರು – ಮೂರು ಕೋಟಿ 20 ಲಕ್ಷ 63 ಸಾವಿರ 616, ಒಟ್ಟು ಸಕ್ರಿಯ ಪ್ರಕರಣಗಳು – ಮೂರು ಲಕ್ಷ 99 ಸಾವಿರ 778, ಒಟ್ಟು ಸಾವು- ನಾಲ್ಕು ಲಕ್ಷ 39 ಸಾವಿರದ 895, ಒಟ್ಟು   67 ಕೋಟಿ 9 ಲಕ್ಷ 59 ​​ಸಾವಿರ ಡೋಸ್ ಲಸಿಕೆ ನೀಡಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: