ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್ ಗೆ ಪ್ರಧಾನಿ ಮೋದಿ ಅಭಿನಂದನೆ

ಟೋಕಿಯೊ,ಸೆ.3-ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದ್ದು, ಪ್ಯಾರಾ ಹೈಜಂಪರ್​ ಪ್ರವೀಣ್​ ಕುಮಾರ್​ ಇಂದು ಬೆಳ್ಳಿಯ ಪದಕವನ್ನು ಜಯಿಸಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 11ಕ್ಕೇರಿದೆ.

ಪ್ರವೀಣ್ ಪದಕ ಜಯಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್ ನಮ್ಮ ಹೆಮ್ಮೆ. ಈ ಪದಕ ಅವರ ಕಠಿಣ ಪರಿಶ್ರಮ ಮತ್ತು ಅಪ್ರತಿಮ ಸಮರ್ಪಣೆಯ ಫಲಿತಾಂಶವಾಗಿದೆ. ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದಿದ್ದಾರೆ.

ಹೈಕಂಪ್ ನಲ್ಲಿ 2.07 ಮೀಟರ್​ ಎತ್ತರ ಜಿಗಿಯುವ ಮೂಲಕ ಪ್ರವೀಣ್​ ಕುಮಾರ್​ ಏಷಿಯನ್ ದಾಖಲೆಯನ್ನು ಮುರಿದರು. ಗ್ರೇಟ್​ ಬ್ರಿಟನ್​ನ ಜೊನಾಥನ್​ ಬ್ರೂಮ್​ ಎಡ್ವರ್ಸ್​ 2.10 ಮೀಟರ್​ ಜಿಗಿಯುವುದರೊಂದಿಗೆ ಚಿನ್ನದ ಪದಕ ಜಯಿಸಿದರೆ, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಪ್ರವೀಣ್​ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ​

ನಿಶಾದ್​ ಕುಮಾರ್​, ಮರಿಯಪ್ಪನ್​ ಥಂಗವೇಲು ಮತ್ತು ಶರದ್​ ಕುಮಾರ್​ ಬಳಿಕ ಪುರುಷರ ಹೈಜಂಪ್​ ಸ್ಪರ್ಧೆಯಲ್ಲಿ ಪದಕ ಜಯಿಸಿದ ನಾಲ್ಕನೇ ಪದಕ ವಿಜೇತ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. (ಏಜೆನ್ಸೀಸ್​, ಎಂ.ಎನ್)

Leave a Reply

comments

Related Articles

error: