ಮೈಸೂರು

ಶ್ರೀಗುಂಜಾನರಸಿಂಹಸ್ವಾಮಿ ಚಾರಿಟಬಲ್ ಟ್ರಸ್ಟ್ ಗೆ ನೂತನ ಆಡಳಿತಾಧಿಕಾರಿ ನೇಮಕ

ಮೈಸೂರು, ಸೆ.3:- ಟಿ.ನರಸೀಪುರದ ಶ್ರೀಗುಂಜಾನರಸಿಂಹಸ್ವಾಮಿ ಚಾರಿಟಬಲ್ ಟ್ರಸ್ಟ್ನ ಸ್ಥಿರ-ಚರ ಆಸ್ತಿಯನ್ನು ಸಂರಕ್ಷಿಸುವುದು ಸೇರಿದಂತೆ, ಸಾರ್ವಜನಿಕರಿಂದ ಬರುವ ಹಣ ದುರುಪಯೋಗವಾಗದಂತೆ ಲೆಕ್ಕಪತ್ರಗಳನ್ನು ನಿರ್ವಹಿಸುವ ಸಲುವಾಗಿ ನೂತನ ಆಡಳಿತಾಧಿಕಾರಿಯಾಗಿ ಟಿ.ನರಸೀಪುರದ ತಹಶೀಲ್ದಾರ್ ಅವರನ್ನು ನೇಮಕ ಮಾಡಲಾಗಿದೆ.
ಶ್ರೀಗುಂಜಾನರಸಿಂಹಸ್ವಾಮಿ ಚಾರಿಟಬಲ್ ಟ್ರಸ್ಟ್ಗೆ ಸೇರಿದ ಒಟ್ಟು ಎಂಟು ಸ್ವತ್ತುಗಳ ಪ್ರಭಾರವನ್ನು ಅವರು ವಹಿಸಿಕೊಂಡಿದ್ದು, ಟ್ರಸ್ಟ್ ಮತ್ತು ಅದರ ಅಧೀನದಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನು ತಹಶೀಲ್ದಾರ್ ಮುಖಾಂತರ ಮಾಡಲಾಗುತ್ತದೆ.
ಘನ ನ್ಯಾಯಾಲಯವು ಟ್ರಸ್ಟಿನ ಆಡಳಿತ ಮಂಡಳಿಯನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ರದ್ದಾಗಿರುವ ಆಡಳಿತ ಮಂಡಳಿಯ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಹಾಗೂ ಯಾವುದೇ ಸದಸ್ಯರೊಂದಿಗೆ ಹಣಕಾಸು ಅಥವಾ ಇತರೆ ವ್ಯವಹಾರಗಳನ್ನು ಸಾರ್ವಜನಿಕರು ನಿರ್ವಹಿಸದಂತೆ ಹಾಗೂ ಟ್ರಸ್ಟ್ನ ಎಲ್ಲಾ ಸ್ಥಿರ ಮತ್ತು ಚರ ಸ್ವತ್ತುಗಳನ್ನು ಆರ್ಜಿಸುವ ಅಥವಾ ಪರಭಾರೆ ಮಾಡುವುದನ್ನು ನಿರ್ಭಂಧಿಸಲಾಗಿದೆ ಎಂದು ಟಿ.ನರಸೀಪುರದ ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: