
ಮೈಸೂರು,ಸೆ.3:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವತಿಯೋರ್ವಳ ಮೇಲೆ ಪರಿಚಿತ ವ್ಯಕ್ತಿ ಹಾಡುಹಗಲೇ ಹಲ್ಲೆ ನಡೆಸಿ, ಅತ್ಯಾಚಾರ ಗೈದ ಘಟನೆ ನಡೆದಿದ್ದು, ಜನತೆಯನ್ನು ಬೆಚ್ಚಿ ಬೀಳಿಸಿದೆ. ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನ ಲ್ಲಿ ಕಳೆದ ವಾರದಲ್ಲಿ ವಿದ್ಯಾರ್ಥಿನಿಯೋರ್ವರ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಮತ್ತೆ ಯುವತಿಯೋರ್ವಳ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ನಡೆಸಿರುವುದು ಬೆಚ್ಚಿ ಬೀಳಿಸಿದೆ. ಅಷ್ಟೇ ಅಲ್ಲದೇ ಅಪರಾಧ ಕೃತ್ಯ ನಡೆಸುವವರಿಗೆ ಪೊಲೀಸ್ ಮೇಲೆ ಭಯ ಇಲ್ಲವೇನೋ ಎಂಬಂತಾಗಿದೆ. ಆರ್ ಎಸ್ ನಾಯ್ಡು ನಗರದಲ್ಲಿ ಇರುವ ಹೋಲಿಕ್ರಾಸ್ ನಲ್ಲಿ ಈ ಘಟನೆ ನಡೆದಿದ್ದು, ಮನೆಯ ಒಳಗಡೆ ನುಗ್ಗಿದ ಪರಿಚಿತ ವ್ಯಕ್ತಿ ಯುವತಿಯ ಕೈಗಳನ್ನು ಹಿಡಿದು ಎಳೆದಾಡಿ,ಚಾಕುವಿನಿಂದ ಚುಚ್ಚಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜೋರಾಗಿ ಕಿರುಚಿಕೊಂಡ ಬಳಿಕ ಜನರು ಬರುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದನಾದರೂ ಪೊಲೀಸರು ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳಕ್ಕೆ ಎನ್ ಆರ್ ಠಾಣೆಯ ಇನ್ಸ್ಪೆಕ್ಟರ್ ಅಜರುದ್ದೀನ್, ಸಬ್ ಇನ್ಸ್ಪೆಕ್ಟರ್ ಜಯಕೀರ್ತಿ,ಡಿಸಿಪಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎನ್ ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಹೆಚ್ಚಿ ನ ವಿಷಯವನ್ನು ಬಹಿರಂಗ ಪಡಿಸಬೇಕಿದೆ. (ಕೆ.ಎಸ್,ಎಸ್.ಎಚ್)