ಕರ್ನಾಟಕಪ್ರಮುಖ ಸುದ್ದಿಮೈಸೂರು

ಕನ್ನಡ ಚಿತ್ರರಂಗಕ್ಕೆ ವಿಶ್ವ ಮಾರುಕಟ್ಟೆ ಒದಗಿಸಿ ಕೊಡಿ: ನಾಗತಿಹಳ್ಳಿ

ಕನ್ನಡ ಚಿತ್ರರಂಗಕ್ಕೆ ವಿಶ್ವ ಮಾರುಕಟ್ಟೆಯನ್ನು ಒದಗಿಸಿಕೊಡಬೇಕು ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಮೈಸೂರಿನಲ್ಲಿ 6ದಿನಗಳ ಕಾಲ ನಡೆಯುವ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ ಮೈಸೂರಿನಲ್ಲಿ ದಸರಾ ಉತ್ಸವ ಸಂದರ್ಭ ಚಲನಚಿತ್ರೋತ್ಸವ ಏರ್ಪಡಿಸಿರುವದು ಸಂತೋಷ ತಂದಿದೆ. ಇಡೀ ಚಿತ್ರೋದ್ಯಮ ಮೈಸೂರಿಗೆ ಸ್ಥಳಾಂತರವಾಗಬೇಕು ಎಂದರು.

ವೀಕ್ಷಕರು ಉತ್ತಮ ಚಿತ್ರವನ್ನು ಆರಿಸಿ ಸ್ವೀಕರಿಸುತ್ತಿರುವುದು ದೊಡ್ಡ ಸಂಗತಿ. ಕನ್ನಡ ಚಿತ್ರರಂಗ ನಿಧಾನವಾಗಿ ದೊಡ್ಡ ಪ್ರಮಾಣದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದೆ. ದೇಶವಿದೇಶಗಳಲ್ಲಿ ಕನ್ನಡ ಚಿತ್ರಗಳನ್ನು ವೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು. ಕನ್ನಡ ಚಿತ್ರರಂಗಕ್ಕೆ ಶ್ರಮಿಸಿದ ನಿರ್ದೇಶಕರು, ನಿರ್ಮಾಪಕರು, ನಟನಟಿಯರನ್ನು ಸ್ಮರಿಸಿದರು.

ಕಾವೇರಿ ವಿವಾದ ಕುರಿತು ಮಾತನಾಡಿದ ಅವರು ಕಾವೇರಿ ನಮ್ಮವಳಾಗಿ ಉಳಿಯಲಿ. ಕನ್ನಡಿಗರಿಗೆ ಒದಗಿ ಬಂದೀರುವ ಸಂಕಷ್ಟಗಳು ಬೇಗ ತೀರಲಿ ಎಂದು ಆಶಿಸಿದರು.

Leave a Reply

comments

Related Articles

error: