ಮೈಸೂರು

ಸರ್ಕಾರದ ಕಾರ್ಮಿಕ ನೀತಿಗೆ ಧಿಕ್ಕಾರ ಕೂಗಿದ ಕಾರ್ಮಿಕರು

ನಂಜನಗೂಡು ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಪಟ್ಟಣದ ಹುಲ್ಲಹಳ್ಳಿ ವೃತ್ತದಿಂದ ರಾಷ್ಟ್ರಪತಿ ರಸ್ತೆ ಮುಖಾಂತರ ಸಾಗಿ ಎಂ.ಜೆ.ರಸ್ತೆ ಮಾರ್ಗವಾಗಿ ನಂಜನಗೂಡಿನ ಎಲ್ಲಾ ಕಾರ್ಖಾನೆಯ ಕಾರ್ಮಿಕರು ಜಾಥಾ ನಡೆಸಿದರು. ಈ ಸಂದರ್ಭ  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ಕುರಿತು ಧಿಕ್ಕಾರ ಕೂಗಿದರು.

ನಂಜನಗೂಡು ಪಟ್ಟಣದ ರಸ್ತೆ ಡಾಂಬರೀಕರಣ,ಕುಡಿಯುವ ನೀರು ಸರ್ವಿಸ್ ರೋಡ್ ಇತ್ಯಾದಿ ಅಭಿವೃದ್ಧಿ ಕೆಲಸ ನಡೆಯಲೇ ಬೇಕು ಎಂದು ಘೋಷಣೆಗಳನ್ನು ಕೂಗಿ ಮತ್ತೆ ಹುಲ್ಲಹಳ್ಳಿ ವೃತ್ತಕ್ಕೆ ಬಂದು ಸಭೆ  ನಡೆಸಿದರು. ನಗರ್ಲೆ ಎಂ.ವಿಜಯ್ ಕುಮಾರ್ ಮಾತನಾಡಿ ಈ ಜಾಥಾದಲ್ಲಿ ನಾನು ಒಬ್ಬ ಕಾರ್ಮಿಕನಾಗಿ ಹೋರಾಟಗಾರನಾಗಿ ನಿಮ್ಮ ಜೊತೆ ಪಾಲ್ಗೊಂಡಿದ್ದೇನೆ ಎಂದರು.

ಜಾಥಾವನ್ನು ಕೆಂಪು ಬಾವುಟ ಹಾರಿಸುವುದರ ಮೂಲಕ ನೂತನ ಶಾಸಕ ಕಳಲೆ ಕೇಶವಮೂರ್ತಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಲ್ಲಿನ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಮನ ನೀಡಿ ಕಾರ್ಮಿಕರ ಪರ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿದರಲ್ಲದೇ ಕಾರ್ಮಿಕ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. (ಕೆ.ಎಸ್-ಎಸ್.ಎಚ್)

 

Leave a Reply

comments

Related Articles

error: