
ಮೈಸೂರು
ಭಾರೀ ಬಿರುಗಾಳಿ ಮಳೆಗೆ ಹಾರಿದ ಮೇಲ್ಛಾವಣಿ
ಮುಂಗಾರು ಈ ಬಾರಿ ಆರ್ಭಟಿಸುತ್ತಲೇ ಪ್ರವೇಶಿಸಿದೆ. ಅದು ಆರಂಭವಾದಂದಿನಿಂದಲೂ ಒಂದಲ್ಲ ಒಂದು ಅವಾಂತರಗಳನ್ನು ಸೃಷ್ಟಿಸುತ್ತಲೇ ಇದೆ. ಈ ಬಾರಿ ಮುಂಗಾರು ಬೇಗನೆ ಪ್ರವೇಶಗೈದಿದೆ ಎಂಬ ಸಂತಸ ಒಂದೆಡೆಯಾದರೆ, ಇವತ್ತು ಮಳೆ ಬಂದರೆ ಇನ್ನೇನಾಗಲಿದೆಯೋ ಎಂಬ ಆತಂಕ ಇಲ್ಲಿನ ಜನತೆಯನ್ನು ಕಾಡಿದೆ. ಮೈಸೂರಿನ ಮದ್ದನ ಹಳ್ಳಿ ಗ್ರಾಮದಲ್ಲಿ ಭಾರೀ ಮಳೆಗೆ ವ್ಯಕ್ತಿಯೋರ್ವರ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ.
ಸೋಮವಾರ ಸುರಿದ ಭಾರೀ ಮಳೆಗೆ ಮುದ್ದಪ್ಪ ಎಂಬವರ ಮನೆಯ ಸಂಪೂರ್ಣ ಮೇಲ್ಛಾವಣಿ ಹಾನಿಗೊಳಗಾಗಿದ್ದು, ಬಿರುಗಾಳಿಗೆ ಹಾರಿಹೋಗಿದೆ. ಇದರಿಂದ ಮನೆಯೊಳಗಡೆ ಮಳೆಯ ನೀರು ಬೀಳುತ್ತಿದ್ದು ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮೈಸೂರು ನಗರದಲ್ಲಿಯೂ ಹಲವೆಡೆ ಮರಗಳು ನಿಲ್ಲಿಸಿಟ್ಟ ಕಾರುಗಳ ಮೇಲೆಲ್ಲ ಬುಡ ಸಮೇತ ಕಿತ್ತು ಬಿದ್ದು ಅವಾಂತರ ಸೃಷ್ಟಿಯಾಗಿತ್ತು.