ಕರ್ನಾಟಕಪ್ರಮುಖ ಸುದ್ದಿಮೈಸೂರು

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಹಿಂದುಳಿದ ವರ್ಗ ಸೇರಿ ಎಲ್ಲರ ಅಭಿವೃದ್ಧಿ ಸಾಧ್ಯ : ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್

ಮೈಸೂರು,ಸೆ.7:-  ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಹಿಂದುಳಿದ ವರ್ಗ ಸೇರಿ ಎಲ್ಲರ ಅಭಿವೃದ್ಧಿ ಸಾಧ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ತಿಳಿಸಿದರು.

ಇಂದು ಮೈಸೂರು ಪ್ರವಾಸದಲ್ಲಿರುವ ಅವರು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ  ನಿಗದಿಯಂತೆ ಪ್ರಸಕ್ತ ಸಾಲಿನಿಂದಲೇ ಜಾರಿ ಮಾಡಲಾಗುತ್ತದೆ. ಈ ನೀತಿ ಸಂಪೂರ್ಣ ಅನುಷ್ಠಾನಕ್ಕೆ 15 ವರ್ಷ ಕಾಲಾವಕಾಶ ಇದೆ. ಈಗಾಗಲೇ ಏಳೆಂಟು ವರ್ಷದಿಂದಲೇ ಚರ್ಚೆಯಲ್ಲಿರೋದರಿಂದ ಅಭಿಪ್ರಾಯ ಸಂಗ್ರಹ ಅಗತ್ಯವಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಹಿಂದುಳಿದ ವರ್ಗ ಸೇರಿ ಎಲ್ಲರ ಅಭಿವೃದ್ಧಿ ಸಾಧ್ಯ ಇದೆ. ಕಾಂಗ್ರೆಸ್ ಗೆ ಯಾವುದೇ ಅಭಿವೃದ್ಧಿ ಬೇಕಾಗಿಲ್ಲ. ಹೀಗಾಗಿಯೇ ಅವರು ಅನಗತ್ಯ ಹೊಂದಲ ಸೃಷ್ಟಿ ಮಾಡಿ ವಿರೋಧ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ  ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾವುದೇ ಪಕ್ಷದಲ್ಲಿ ನಾಯಕರಿದ್ದಾಗ ಅವರ ಮುಂದಾಳತ್ವದಲ್ಲಿ ಎಲ್ಲಾ ನಡೆದುಕೊಂಡು ಹೋಗುತ್ತಿರತ್ತೆ. ಈಗ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದಾರೆ, ಅಧ್ಯಕ್ಷರು ಕಟೀಲ್ ಇದ್ದಾರೆ. ಅವರ ಮುಂದಾಳತ್ವದಲ್ಲಿ ಪಕ್ಷ ನಡೆಯುತ್ತಿದೆ. ಮುಂದಿನ ಚುನಾವಣೆ ಯಾರ ನಾಯಕತ್ವದಲ್ಲಿ ನಡೆಯಬೇಕು ಅನ್ನೋದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಅದರ ಚರ್ಚೆ ಈಗ ಬೇಡ ಎಂದರು.

ಅಪ್ಘಾನ್ ವಿದ್ಯಾರ್ಥಿಗಳ ವೀಸಾ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿ    ಅದನ್ನು ವಿದೇಶಾಂಗ ಸಚಿವರು ನೋಡಿಕೊಳ್ಳುತ್ತಾರೆ. ಅವಧಿ ಮುಗಿದವರು ಅರ್ಜಿ ಹಾಕಿಕೊಳ್ಳಲಿ. ಅದನ್ನು ವಿದೇಶಾಂಗ ಇಲಾಖೆಯವರು   ಪರಿಶೀಲನೆ ಮಾಡುತ್ತಾರೆ. ನಾವು ಯಾರಿಗೂ ತಿಂಗಳ ಅವಧಿಗೆ ವೀಸಾ ಕೊಡೋದಿಲ್ಲ. ಶೈಕ್ಷಣಿಕ ಅವಧಿಗೆ ಅಂತ ವೀಸಾ ಪಡೆದುಕೊಂಡಿರುತ್ತಾರೆ.ಇದರಲ್ಲಿ ನಾವು ತಲೆತೂರಿಸುವ ಪ್ರಮೇಯ ಇಲ್ಲ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: