ದೇಶಪ್ರಮುಖ ಸುದ್ದಿಮನರಂಜನೆವಿದೇಶ

ಹಾಲಿವುಡ್ ನ ಖ್ಯಾತ ನಟ ಮೈಕೆಲ್ ಕೆ. ವಿಲಿಯಮ್ಸ್ ನಿಧನ

ದೇಶ(ನವದೆಹಲಿ)ಸೆ.7:- ಹಾಲಿವುಡ್ ನ ಖ್ಯಾತ ನಟ ಮೈಕೆಲ್ ಕೆ. ವಿಲಿಯಮ್ಸ್   ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.

ಅವರ ಮೃತದೇಹವನ್ನು ಸೋಮವಾರ ನ್ಯೂಯಾರ್ಕ್‌ನ ಬ್ರೂಕ್ಲಿನ್ ಪೆಂಟ್‌ಹೌಸ್ ಅಪಾರ್ಟ್‌ಮೆಂಟ್‌ನಿಂದ ಹೊರತೆಗೆಯಲಾಗಿದೆ. ನ್ಯೂಯಾರ್ಕ್ ನಗರ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಸಾವಿನ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನ್ಯೂಯಾರ್ಕ್ ಪೊಲೀಸ್ ಇಲಾಖೆಯ ವಕ್ತಾರ ಲೆಫ್ಟಿನೆಂಟ್ ಜಾನ್ ಗ್ರಿಂಪೆಲ್, “ತುರ್ತು ನಿರ್ವಾಹಕರಿಗೆ ಕರೆ ಮಾಡಿದ ನಂತರ ವಿಲಿಯಮ್ಸ್ ತನ್ನ ಬ್ರೂಕ್ಲಿನ್ ಅಪಾರ್ಟ್ಮೆಂಟ್ ಮೆಂಟ್ ನಲ್ಲಿ ಮಧ್ಯಾಹ್ನ 2 ಗಂಟೆಗೆ (ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ6ಕ್ಕೆ) ಶವವಾಗಿ ಪತ್ತೆಯಾಗಿದ್ದರು. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಸಾವಿನ ಕಾರಣ ಶೀಘ್ರವೇ ತಿಳಿದು ಬರಲಿದೆ ಎಂದಿದ್ದಾರೆ.

ಮೈಕೆಲ್  ಮಿತಿಮೀರಿದ ಡ್ರಗ್ಸ್  ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಅವರ ಸಾವಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಮೈಕೆಲ್ ಅವರ ಟಿವಿ ಕಾರ್ಯಕ್ರಮ ‘ದಿ ವೈರ್’ ಗಾಗಿ ಸಾಕಷ್ಟು ಪ್ರಸಿದ್ಧರಾಗಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಒಮರ್ ಲಿಟಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪ್ರದರ್ಶನದಲ್ಲಿ, ಅವರು ಕಟ್ಟುನಿಟ್ಟಾದ ನೈತಿಕ ಸಂಹಿತೆಯನ್ನು ಹೊಂದಿರುವ ಕ್ರಿಮಿನಲ್ ಪಾತ್ರವನ್ನು ನಿರ್ವಹಿಸಿದ್ದರು. ಮೈಕೆಲ್ ಸಾವಿನಿಂದಾಗಿ ಹಾಲಿವುಡ್ ಉದ್ಯಮದಲ್ಲಿ ಸಂತಾಪದ ಅಲೆ ಎದ್ದಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: