ಮೈಸೂರು

20 ಚಿನ್ನದ ಪದಕ ನಾಲ್ಕು ದತ್ತಿ ಬಹುಮಾನ ಪಡೆದ ಚೈತ್ರ ಹೆಗಡೆ

ಮೈಸೂರು, ಸೆ 7:-ರಸಾಯನಶಾಸ್ತ್ರ ವಿಭಾಗದಲ್ಲಿ ಇಡೀ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಪಡೆದು, 20 ಚಿನ್ನದ ಪದಕ ಹಾಗೂ ನಾಲ್ಕು ದತ್ತಿ ಬಹುಮಾನಗಳನ್ನು ಪಡೆಯುವ ಮೂಲಕ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಚೈತ್ರ ನಾರಾಯಣ್ ಹೆಗಡೆ  ಮೂಲಕ ಸಂಭ್ರಮ ಪಟ್ಟಿದ್ದಾರೆ.

ಆರ್ಗಾನಿಕ್, ಇನ್ ಆರ್ಗಾನಿಕ್ ಮತ್ತು ಫಿಸಿಕಲ್ ಕೆಮಿಸ್ಟ್ರಿಯಲ್ಲಿ ತಲಾ 3 ಚಿನ್ನದ ಪದಗಳನ್ನು ಪಡೆದಿರುವ ಚೈತ್ರಾ ಒಟ್ಟಾರೆ ಅತಿ ಹೆಚ್ಚು ಫಲಿತಾಂಶ ಪಡೆದು ಇನ್ನೂ 11 ಪದಕಗಳೊಂದಿಗೆ ಒಟ್ಟು 20 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಚೈತ್ರಾ ಬಿಎಸ್ಸಿ ಪದವಿಗಾಗಿ ಮೈಸೂರಿನ ಯುವರಾಜ ಕಾಲೇಜು ಸೇರಿ, ನಂತರ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ ಎಂಎಸ್ಸಿ ಪದವಿ ಪೂರ್ಣಗೊಳಿಸಿದರು. ಇದೀಗ ಯುವರಾಜ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಾರಾಯಣ ಮತ್ತು ಸುಮಂಗಲಾ ದಂಪತಿಯ ಪುತ್ರಿಯಾಗಿರುವ ಚೈತ್ರ ಮುಂದೆ ರಸಾಯನಶಾಸ್ತ್ರ ವಿಷಯದಲ್ಲೇ ಸಂಶೋಧನೆ ಮಾಡಲು ಬಯಸಿದ್ದಾರೆ. ಸದ್ಯ ಫೆಲೋಶಿಪ್ ಗೆ ಆಯ್ಕೆಯಾಗಿದ್ದು, ಪಿಎಚ್‌ಡಿ ನಂತರ ಸಂಶೋಧಕಿಯಾಗುವ ಗುರಿ ಹೊಂದಿದ್ದಾರೆ.

Leave a Reply

comments

Related Articles

error: