ದೇಶಪ್ರಮುಖ ಸುದ್ದಿಮನರಂಜನೆ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಮಾತೃ ವಿಯೋಗ

ದೇಶ(ಮುಂಬೈ)ಸೆ.8:-   ಬಾಲಿವುಡ್ ನಟ ಅಕ್ಷಯ್ ಕುಮಾರ್ ತಾಯಿ ಅರುಣಾ ಭಾಟಿಯಾ ನಿಧನರಾಗಿದ್ದಾರೆ.

ಈ ದುಃಖದ ಸುದ್ದಿಯನ್ನು ಅಕ್ಷಯ್ ಕುಮಾರ್ ಟ್ವಿಟರ್ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.   ಅಕ್ಷಯ್ ಕುಮಾರ್ ಅವರ ತಾಯಿ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲವು ದಿನಗಳ ಹಿಂದೆ ಅವರನ್ನು ಮುಂಬೈನ ಪೊವಾಯಿಯಲ್ಲಿರುವ ಹಿರಾನಂದನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಭಾವನಾತ್ಮಕ ಟ್ವೀಟ್  ಮಾಡಿರುವ  ಅಕ್ಷಯ್ ಕುಮಾರ್, ‘ಅವಳು ನನ್ನ ಸರ್ವಸ್ವ.   ಇಂದು ನಾನು ಅಸಹನೀಯ ನೋವನ್ನು ಅನುಭವಿಸುತ್ತಿದ್ದೇನೆ. ನನ್ನ ತಾಯಿ ಶ್ರೀಮತಿ ಅರುಣಾ ಭಾಟಿಯಾ ಇಂದು ಬೆಳಿಗ್ಗೆ  ಈ ಜಗತ್ತನ್ನು ತೊರೆದು ಬೇರೆ ಜಗತ್ತಿನಲ್ಲಿರುವ ನನ್ನ ತಂದೆಯನ್ನು ತಲುಪಿದ್ದಾರೆ. ನಾನು ನಿಮ್ಮೆಲ್ಲರ ಪ್ರಾರ್ಥನೆಯನ್ನು  ಗೌರವಿಸುತ್ತೇನೆ . ನಾನು ಮತ್ತು ನನ್ನ ಕುಟುಂಬ ದುಃಖದ ದಿನಗಳನ್ನು ಎದುರಿಸುತ್ತಿದ್ದೇವೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ  ಅಕ್ಷಯ್ ಕುಮಾರ್ ತನ್ನ ತಾಯಿಗಾಗಿ ಪ್ರಾರ್ಥಿಸುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳ ಕಷ್ಟದ ಸಮಯ. ನಿಮ್ಮ ಪ್ರತಿಯೊಂದು ಪ್ರಾರ್ಥನೆಯು ಸಹಾಯ ಮಾಡುತ್ತದೆ ಎಂದು ವಿನಂತಿಸಿಕೊಂಡಿದ್ದರು.

ಆದರೆ ಅವರ ತಾಯಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದು, ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದ ನಟ ಅಕ್ಷಯ್ ಕುಮಾರ್ ಇಂದು ತುಂಬಾ ನೋವಿನಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ತಾಯಿಯನ್ನು ನೋಡಿಕೊಳ್ಳಲು ಎರಡು ದಿನಗಳ ಹಿಂದೆ ಅಕ್ಷಯ್ ಕುಮಾರ್ ಲಂಡನ್‌ ನಿಂದ ಮುಂಬೈಗೆ ಬಂದಿದ್ದರು. ಅಕ್ಷಯ್ ಕುಮಾರ್ ಕಳೆದ ಕೆಲವು ವಾರಗಳಿಂದ ಲಂಡನ್‌ ನಲ್ಲಿ ತಮ್ಮ ಮುಂಬರುವ ‘ಸಿಂಡ್ರೆಲ್ಲಾ’ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಆದರೆ ಅವರ ತಾಯಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದ ತಕ್ಷಣ ಅಕ್ಷಯ್ ಕುಮಾರ್ ವಿಮಾನದಲ್ಲಿ ಮುಂಬೈಗೆ ಮರಳಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: