ಮೈಸೂರು

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನೂತನ ಕಟ್ಟಡ ವೀಕ್ಷಣೆ ಮಾಡಿದ ಪ್ರತಾಪ್ ಸಿಂಹ

ಮೈಸೂರು,ಸೆ.8:- ಸುಮಾರು 09.95ಕೋಟಿ ಅನುದಾನದಲ್ಲಿ ಮೈಸೂರು ನಗರ, ಕೆರ್ಗಳ್ಳಿ,  ನ್ಯಾಯಾಂಗ ಬಡಾವಣೆ,  ಕ್ರೈಸ್ಟ್ ಪಬ್ಲಿಕ್ ಸ್ಕೂಲ್ ಹಿಂಭಾಗದಲ್ಲಿ ನಿರ್ಮಾಣಗೊಂಡಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನೂತನ ಕಟ್ಟಡವನ್ನು ಇಂದು   ಸಂಸದ ಪ್ರತಾಪ್ ಸಿಂಹ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಪ್ರೊ.ಟಿ.ಟಿ.ಬಸವನಗೌಡ ಅವರೊಂದಿಗೆ ವೀಕ್ಷಣೆ ಮಾಡಿದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಮೈಸೂರು ನಗರದಲ್ಲಿ ಜುಲೈ 2011ರಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮೈಸೂರು ಇವರಿಂದ ಮೈಸೂರು ನಗರದ ಖಜಾನೆ ನೌಕರರ ಗೃಹ ನಿರ್ಮಾಣ ಸಂಘ ಬಡಾವಣೆ, ಕೇಗಳ್ಳಿ ಇಲ್ಲಿನ 5168ಚ.ಮೀ ವಿಸ್ತೀರ್ಣದ ನಾಗರೀಕ ಸೌಕರ್ಯ ನಿವೇಶನ ಸಂಖ್ಯೆ ಸಿಎ-03 ನಿವೇಶನವನ್ನು 29/10/2015 ಮಂಜೂರು ಮಾಡಿಸಿಕೊಂಡು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಹೆಸರಿನಲ್ಲಿ ನೋಂದಾವಣೆ ಮಾಡಿಸಿಕೊಳ್ಳಲಾಗಿದೆ. ಈ ನಿವೇಶನದಲ್ಲಿ ಪಾರಂಪರಿಕ ನಗರವಾದ ಮೈಸೂರು ನಗರದಲ್ಲಿ ರಾಜ್ಯಕ್ಕೆ ಮಾದರಿಯಾದ ಬುಡಕಟ್ಟು ವಸ್ತು ಸಂಗ್ರಹಾಲಯ/ತರಬೇತಿ ಕೇಂದ್ರ ಮತ್ತು ಕಛೇರಿ ಕಟ್ಟಡದ ನಿರ್ಮಾಣ ಕಾಮಗಾರಿಗಳನ್ನು ಕೇಂದ್ರ ಸರ್ಕಾರದ 400.00 ಲಕ್ಷಗಳು ಮತ್ತು ರಾಜ್ಯ ಸರ್ಕಾರದ 595.00 ಲಕ್ಷಗಳು ಸೇರಿ ಒಟ್ಟು 995 ಲಕ್ಷಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಸರ್ಕಾರ ಆದೇಶ ನೀಡಿದೆ. ಸರ್ಕಾರದ ಆದೇಶದಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೂಲಕ ಟೆಂಡರ್ ಕರೆದು   ಗುತ್ತಿಗೆದಾರರಾದ ಎನ್ ಎನ್ ಮೂರ್ತಿ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೊಂಡಿದ್ದಾರೆ. ಕಟ್ಟಡದ ವಿಸ್ತೀರ್ಣ ತಳಮಹಡಿಯಲ್ಲಿ 764 ಚ.ಮೀ, ನೆಲಮಹಡಿ 692 ಚ.ಮೀ, ಮೊದಲನೆ ಮಹಡಿ 692 ಚ.ಮೀ, ಎರಡನೇ ಮಹಡಿ 692ಚ.ಮೀ, (ಒಟ್ಟು 2840 ಚ.ಮೀ) ಪ್ರಸ್ತುತ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಸರ್ಕಾರದ ಆದೇಶದಂತೆ ಕಟ್ಟಡದ ಒಳಾಂಗಣ ವಿನ್ಯಾಸ ಕಾರ್ಯಗಳನ್ನು ಕೆಆರ್ ಐ ಡಿಎಲ್ ಮೈಸೂರು ಇವರು ಕೈಗೊಂಡಿದ್ದು ಪ್ರಗತಿಯಲ್ಲಿದೆ. ಈ ಕಟ್ಟಡವನ್ನು ಲೋಕಾರ್ಪಣೆಗಾಗಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲು  ಕ್ರಮ ವಹಿಸಿ ಕಟ್ಟಡದ ಉದ್ಘಾಟನೆಯನ್ನು ರಾಷ್ಟ್ರಪತಿಗಳ ಅಮೃತ ಹಸ್ತದಿಂದ ನೆರವೇರಿಸಿಕೊಡುವಂತೆ ಆಹ್ವಾನಿಸುವ ಸಲುವಾಗಿ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ ಇವರ ಮೂಲಕ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರ ಕಛೇರಿಗೆ ಮುಂದಿನ ಕ್ರಮಕ್ಕೆ ಸಲ್ಲಿಸಲಾಗಿದೆ.

Leave a Reply

comments

Related Articles

error: