ದೇಶಪ್ರಮುಖ ಸುದ್ದಿ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 43,263 ಹೊಸ ಕೊರೋನಾ ಪ್ರಕರಣ ಪತ್ತೆ

ದೇಶ(ನವದೆಹಲಿ)ಸೆ.9:- ದೇಶದಲ್ಲಿ ಕೊರೊನಾ ಸೋಂಕು ಮತ್ತೊಮ್ಮೆ ಹೆಚ್ಚಾಗಿದೆ. 70 ರಷ್ಟು ಪ್ರಕರಣಗಳು ಕೇರಳದಲ್ಲಿಯೇ ದಾಖಲಾಗುತ್ತಿವೆ. ಇತ್ತೀಚಿನ ಮಾಹಿತಿಯನ್ನು ಆರೋಗ್ಯ ಸಚಿವಾಲಯ ಗುರುವಾರ ಬೆಳಿಗ್ಗೆ ಬಿಡುಗಡೆ ಮಾಡಿದೆ. ಸಚಿವಾಲಯದ ಪ್ರಕಾರ  ಕಳೆದ 24 ಗಂಟೆಗಳಲ್ಲಿ 43,263 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದಕ್ಕೂ ಒಂದು ದಿನ ಮೊದಲು 37,875 ಪ್ರಕರಣಗಳು ಬಂದಿತ್ತು. ಅದೇ ವೇಳೆ ಕಳೆದ 24 ಗಂಟೆಗಳಲ್ಲಿ 338 ಕೊರೋನಾ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. 40,567 ಜನರು ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. 2358 ಸಕ್ರಿಯ ಪ್ರಕರಣಗಳು ಹೆಚ್ಚಾಗಿದೆ.

ಕೊರೋನಾ ಸಾಂಕ್ರಾಮಿಕದ ಆರಂಭದಿಂದ, ಒಟ್ಟು ಮೂರು ಕೋಟಿ 31 ಲಕ್ಷ 39 ಸಾವಿರ ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ 4 ಲಕ್ಷ 41 ಸಾವಿರದ 749 ಜನರು ಸಾವನ್ನಪ್ಪಿದ್ದಾರೆ.   ಇಲ್ಲಿಯವರೆಗೆ 3 ಕೋಟಿ 23 ಲಕ್ಷ 4 ಸಾವಿರ ಜನರು ಗುಣಮುಖರಾಗಿದ್ದಾರೆ. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷಕ್ಕಿಂತ ಕಡಿಮೆ ಇದೆ. ಒಟ್ಟು 3 ಲಕ್ಷ 93 ಸಾವಿರದ 614 ಜನರು ಇನ್ನೂ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದು,   ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೋನಾದ ಒಟ್ಟು ಪ್ರಕರಣಗಳು – ಮೂರು ಕೋಟಿ 31 ಲಕ್ಷ 39 ಸಾವಿರದ 981, ಒಟ್ಟು ಗುಣಮುಖರಾದವರು- 3 ಕೋಟಿ 23 ಲಕ್ಷ 4 ಸಾವಿರದ 618, ಒಟ್ಟು ಸಕ್ರಿಯ ಪ್ರಕರಣಗಳು – ಮೂರು ಲಕ್ಷ 93 ಸಾವಿರದ 614, ಒಟ್ಟು ಸಾವು- ನಾಲ್ಕು ಲಕ್ಷ 41 ಸಾವಿರದ 749, ಒಟ್ಟು   71 ಕೋಟಿ 65 ಲಕ್ಷ 97 ಸಾವಿರ ಡೋಸ್ ಲಸಿಕೆ ನೀಡಲಾಗಿದೆ.

ಸೆಪ್ಟೆಂಬರ್ 8 ರವರೆಗೆ ದೇಶಾದ್ಯಂತ 71 ಕೋಟಿ 65 ಲಕ್ಷ 97 ಸಾವಿರ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 86.91 ಲಕ್ಷ ಲಸಿಕೆಗಳನ್ನು ನಿನ್ನೆ ನೀಡಲಾಗಿದೆ. ಅದೇ  ವೇಳೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪ್ರಕಾರ  ಇದುವರೆಗೆ 53.68 ಕೋಟಿ ಕೊರೋನಾ ಪರೀಕ್ಷೆಗಳನ್ನು ಮಾಡಲಾಗಿದೆ. ಕೊನೆಯ ದಿನ 18.17 ಲಕ್ಷ ಕೊರೋನಾ ಮಾದರಿ ಪರೀಕ್ಷೆಗಳನ್ನು ಮಾಡಲಾಗಿದ್ದು, ಧನಾತ್ಮಕ ದರವು 3 ಪ್ರತಿಶತಕ್ಕಿಂತ ಕಡಿಮೆಯಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: