ಪ್ರಮುಖ ಸುದ್ದಿಮೈಸೂರು

ಗೌರಿ ಗಣೇಶ ಹಬ್ಬಕ್ಕೆ ಶುಭ ಕೋರಿದ ಸಚಿವ ಎಸ್ ಟಿ

ಮೈಸೂರು,ಸೆ.9:- ಸರ್ವರಿಗೂ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಪ್ರಥಮ ಪೂಜಕ, ವಿಘ್ನಗಳ ನಿವಾರಕ, ಏಕದಂತ ಎಂಬಿತ್ಯಾದಿ ನಾಮಧೇಯಗಳಿಂದ ಕರೆಯಲ್ಪಡುವ ಗಣೇಶ ಸಮಸ್ತ ಜನತೆಗೆ ಒಳಿತನ್ನುಂಟು ಮಾಡಲಿ. ಈಗ ಇಡೀ ವಿಶ್ವಕ್ಕೆ ವ್ಯಾಪಿಸಿರುವ ಕೊರೋನಾ ಮಹಾಮಾರಿ ಶಾಶ್ವತವಾಗಿ ಮರೆಯಾಗಲಿ, ಬಂದಿರುವ ಸಂಕಷ್ಟಗಳೆಲ್ಲವೂ ದೂರಾಗುವಂತಾಗಲಿ ಎಂದು ಸಚಿವ ಎಸ್.ಟಿ.ಸೋಮಶೇಖರ್ ಶುಭಕೋರಿದ್ದಾರೆ.

ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು, ಮಕ್ಕಳಿಗೆ ಕಲಿಕೆ ಹಿತದೃಷ್ಟಿಯಿಂದ ಯಾವುದೇ ಸಮಸ್ಯೆಯಾಗದೆ ಉತ್ತಮವಾದ ರೀತಿಯಲ್ಲಿ ಮುಂದುವರಿಯಲಿ. ಇನ್ನು ಜನತೆಗೂ ಸಹ ಆರ್ಥಿಕ ಚೇತರಿಕೆ ಸಂಬಂಧ ಅಂದುಕೊಂಡ ಕೆಲಸಗಳು ಕೈಗೂಡಲಿ ಎಂದು ಆಶಿಸುತ್ತೇನೆ.

ಗೌರಿ-ಗಣೇಶ ಆಯುರಾರೋಗ್ಯವನ್ನು ಎಲ್ಲರಿಗೂ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಜನತೆಗೆ ಚೌತಿ ಹಬ್ಬದ ಶುಭಾಶಯಗಳನ್ನು ಹೇಳಬಯಸುತ್ತೇನೆ ಎಂದಿದ್ದಾರೆ.

Leave a Reply

comments

Related Articles

error: