ದೇಶಪ್ರಮುಖ ಸುದ್ದಿಮನರಂಜನೆ

ತೆಲುಗು ನಟ ಸಾಯಿ ಧರ್ಮತೇಜ್ ಗೆ ಅಪಘಾತ

ದೇಶ(ಹೈದರಾಬಾದ್)ಸೆ.11:-  ತೆಲುಗಿನ ಖ್ಯಾತ ನಟ ಸಾಯಿ ಧರ್ಮತೇಜ್ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಸಾಯಿ ಧರ್ಮ ತೇಜ್‌ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೈದರಾಬಾದ್‌ ನಲ್ಲಿರುವ ಕೇಬಲ್‌ ಬ್ರಿಜ್ಡ್ ಬಳಿ ಬೈಕ್ ನಲ್ಲಿ ವೇಗವಾಗಿ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸ್ಪೋರ್ಟ್ ಬೈಕ್ ನ್ನು ವೇಗವಾಗಿ ಚಲಾಯಿಸಿದ್ದೇ  ಘಟನೆಗೆ  ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಯಿ ಧರ್ಮ ತೇಜ್‌ ಹೆಲ್ಮೆಟ್‌ ಧರಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜುಬಿಲಿ ಹಿಲ್ಸ್‌ನ ಅಪೋಲೊ ಆಸ್ಪತ್ರೆಯಲ್ಲಿ ಸಾಯಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.   ಸಾಯಿ ಧರಮ್ ಸಹೋದರ ವೈಷ್ಣವ್ ತೇಜ್, ಚಿಕ್ಕಪ್ಪ ಪವನ್ ಕಲ್ಯಾಣ್, ಸೋದರ ಸಂಬಂಧಿಗಳಾದ ವರುಣ್ ತೇಜ್, ನಿಹಾರಿಕಾ ಕೊನಿಡೆಲಾ ಮತ್ತು ಸ್ನೇಹಿತ ಸಂದೀಪ್ ಕಿಶನ್ ಆಸ್ಪತ್ರೆಗೆ ಭೇಟಿ ನೀಡಿ  ನಟನ ಆರೋಗ್ಯ ವಿಚಾರಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: