ದೇಶಪ್ರಮುಖ ಸುದ್ದಿ

ಮುಂಬೈನಲ್ಲಿ ಯುವತಿಯ ಮೇಲೆ ಅತ್ಯಾಚಾರ; ಓರ್ವನ ಬಂಧನ

ದೇಶ(ಮುಂಬೈ)ಸೆ.11:- ದೇಶದ ವಾಣಿಜ್ಯ ನಗರಿ  ಮುಂಬೈನಿಂದ  ಹೃದಯ ಕಲಕುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಸಾಕಿನಾಕಾ ಪ್ರದೇಶದಲ್ಲಿ  30 ವರ್ಷದ ಯುವತಿಯೋರ್ವಳು   ನಿರ್ಭಯಾ ರೀತಿಯಲ್ಲಿಯೇ ಕ್ರೌರ್ಯಕ್ಕೆ ಒಳಗಾಗಿದ್ದಾಳೆ.

ಅತ್ಯಾಚಾರದ ನಂತರ ಯುವತಿಗೆ ಹಿಂಸೆ ನೀಡಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಈ ಪ್ರಕರಣದಲ್ಲಿ ಇದುವರೆಗೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಸಂತ್ರಸ್ತೆ  ಪ್ರಜ್ಞೆ ಕಳೆದುಕೊಂಡಿದ್ದು, ಪ್ರಜ್ಞೆ ಬಂದ ನಂತರವೇ ಆಕೆಯ ಹೇಳಿಕೆಯನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಈ ಯುವತಿಯನ್ನು   ಸಾಕಿನಾಕಾ ಬಳಿ  ಟೆಂಪೋದಲ್ಲಿ ಅತ್ಯಾಚಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ 2012 ರ ‘ನಿರ್ಭಯಾ’ ಪ್ರಕರಣವನ್ನು ನೆನಪಿಸುತ್ತದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ 45 ವರ್ಷದ ಆರೋಪಿ ಮೋಹನ್ ಚೌಹಾಣ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಾಸಗಿ ಅಂಗಗಳಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: