ಕ್ರೀಡೆಪ್ರಮುಖ ಸುದ್ದಿವಿದೇಶ

ಯುಎಸ್ ಓಪನ್ 2021: ಇತಿಹಾಸ ನಿರ್ಮಿಸಲು ನೊವಾಕ್ ಜೊಕೊವಿಚ್ ಗೆ ಒಂದೇ ಹೆಜ್ಜೆ ಬಾಕಿ

ದೇಶ(ನವದೆಹಲಿ)ಸೆ.11:- ಸೆರ್ಬಿಯಾದ   ಟೆನಿಸ್ ಸ್ಟಾರ್  ಆಟಗಾರ ನೊವಾಕ್ ಜೊಕೊವಿಚ್ ಇತಿಹಾಸ ಸೃಷ್ಟಿಸಲು ಕೇವಲ ಒಂದೇ ಹೆಜ್ಜೆ ದೂರದಲ್ಲಿದ್ದಾರೆ. ಯುಎಸ್ ಓಪನ್‌ ನ ಸೆಮಿಫೈನಲ್ ಪಂದ್ಯದಲ್ಲಿ ಜೊಕೊವಿಚ್ ಜ್ವೆರೆವ್ ಅವರನ್ನು ಸೋಲಿಸಿ ಫೈನಲ್ ತಲುಪಿದರು. ಜೊಕೊವಿಚ್ ಫೈನಲ್‌ನಲ್ಲಿ ಡೇನಿಲ್ ಮೆಡ್ವೆದೇವ್ ಅವರನ್ನು ಎದುರಿಸಲಿದ್ದಾರೆ.

ಆದಾಗ್ಯೂ ಜ್ವೆರೆವ್ ಜೊಕೊವಿಚ್‌ ಗೆ ಕಠಿಣ ಸ್ಪರ್ಧೆ ನೀಡಿದರು. ಜ್ವೆರೆವ್ ಮೊದಲ ಸೆಟ್ ನಲ್ಲಿ ಜೊಕೊವಿಚ್ ಅವರನ್ನು 6-4ರಿಂದ ಸೋಲಿಸಿದರಲ್ಲದೇ, ಪಂದ್ಯ ತಿರುವು ಪಡೆಯುವ ಸೂಚನೆ ನೀಡಿದರು. ಆದರೆ ಜೊಕೊವಿಚ್ ಅದ್ಭುತವಾದ ಪುನರಾಗಮನ ಮಾಡಿದರು, ಮುಂದಿನ ಎರಡು ಸೆಟ್‌ ಗಳನ್ನು 6-2 ಮತ್ತು 6-4ರಿಂದ ಗೆದ್ದರು. ನಾಲ್ಕನೇ ಸೆಟ್ ನಲ್ಲಿ, ಜ್ವೆರೆವ್ ಕೂಡ ಉತ್ತಮ ಪುನರಾಗಮನ ಮಾಡಿದರು. ಜೊಕೊವಿಚ್ ಅವರನ್ನು 6-4ರಿಂದ ಸೋಲಿಸಿದರು. ಆದಾಗ್ಯೂ, ಜೊಕೊವಿಚ್ ಕೊನೆಯ ಸೆಟ್ ಅನ್ನು 6-2ರಿಂದ ಗೆದ್ದರು, ಅವರು ಯಾಕೆ ಪ್ರಸ್ತುತ ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: