ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಸೆ.19ರಿಂದ ಯುಎಇಯಲ್ಲಿ ಐಪಿಎಲ್ : ದುಬೈ ತಲುಪಿದ ತಂಡ

ವಿದೇಶ(ದುಬೈ)ಸೆ.13:- ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುವ ಭಾರತದ ಆಟಗಾರರು ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಯಲ್ಲಿ ಪಾಲ್ಗೊಳ್ಳಲು ದುಬೈಗೆ ಬಂದಿಳಿದರು. ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಈ ಆಟಗಾರರು ಭಾರತ ತಂಡದಲ್ಲಿದ್ದರು.
ಕಳೆದ ಏಪ್ರಿಲ್‌-ಮೇ ನಲ್ಲಿ ಐಪಿಎಲ್ ಟೂರ್ನಿಯ ಮೊದಲ ಹಂತವು ಭಾರತದಲ್ಲಿಯೇ ಆಯೋಜನೆಗೊಂಡಿತ್ತು. ಆದರೆ ಬಯೋಬಬಲ್‌ ವ್ಯವಸ್ಥೆಯಲ್ಲಿಯೇ ಕೊರೊನಾ ಸೋಂಕು ಹರಡಿ, ಕೆಲವು ಆಟಗಾರರು ಸೋಂಕಿತರಾಗಿದ್ದರು. ಅದರಿಂದಾಗಿ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಎರಡನೇ ಹಂತವು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ಇದೇ 19ರಿಂದ ನಡೆಯಲಿದೆ.

‘ದುಬೈಗೆ ತಲುಪಿದ ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ, ಅಕ್ಷರ್‌ ಪಟೇಲ್, ಪೃಥ್ವಿ ಶಾ ಮತ್ತು ಉಮೇಶ್ ಯಾದವ್ ಕೋವಿಡ್ ಪರೀಕ್ಷೆಗಳಿಗೆ ಒಳಗಾಗಿದ್ದಾರೆ. ಎಲ್ಲ ಆಟಗಾರರು ನಿಯಮಗಳ ಅನ್ವಯ ಆರು ದಿನಗಳ ಕ್ವಾರಂಟೈನ್‌ ಗೆ ಒಳಗಾಗುವರು. ಈ ಅವಧಿಯಲ್ಲಿ ಮೂರು ಬಾರಿ ಅವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ’ ಎಂದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸ್‌ ತಿಳಿಸಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: