ಮೈಸೂರು

ಹರಿಯಾಣದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ನಡೆದ ಅತ್ಯಾಚಾರ ಕೊಲೆ ಖಂಡಿಸಿ ಪ್ರತಿಭಟನೆ

ಮೈಸೂರು,ಸೆ.13:- ಮಹಿಳಾ ಪೊಲೀಸ್ ಡಿಫೆನ್ಸ್ ಆಫೀಸರ್ ಓರ್ವರನ್ನು ಅತ್ಯಾಚಾರ ಮಾಡಿ ಬರ್ಬರವಾಗಿ ಕೊಲೆಗೈದಿರುವುದನ್ನು ಖಂಡಿಸಿ ದುಷ್ಕರ್ಮಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಹರಿಯಾಣದ ಫರಿದಾಬಾದ್ ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ  ನಡೆಸಲಾದ ಅತ್ಯಾಚಾರ-ಕೊಲೆ ಖಂಡಿಸಿದರಲ್ಲದೇ ದುಷ್ಕರ್ಮಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಘೋಷಣೆ ಕೂಗಿದರು. ಪ್ರಕರಣವನ್ನು ಸಿಬಿಐಗೆ ವಹಿಸಿ ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆಯನ್ನು ಕೊಡಿಸಬೇಕು. ಇನ್ನು ಮುಂದೆ ದೇಶದಲ್ಲಿ ಎಲ್ಲಿಯೂ ಸಹ ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದೊಡ್ಡಸಿದ್ದು ಹಾದನೂರು, ಚಾ.ಶಿವಕುಮಾರ್, ಪುಟ್ಟಲಕ್ಷ್ಮಮ್ಮ, ಬನ್ನಳ್ಳಿ ಸೋಮಣ್ಣ, ವಸಂತ ಹೊನ್ನೇನಹಳ್ಳಿ, ಚಂದ್ರು ಕಳ್ಳಿ ಮುದ್ದನಹಳ್ಳಿ, ಚಾಮರಾಜು ಇಲವಾಲ,ಬಸವರಾಜು ದೇವರಸನಹಳ್ಳಿ, ಬಲರಾಮ್, ಮಹೇಶ್, ಪ್ರಕಾಶ, ಶಿವಮ್ಮ, ಲಕ್ಷ್ಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: