ಮೈಸೂರು

ಸೆಪ್ಟೆಂಬರ್ 11: ರಕ್ಷಾಬಂಧನದ ಮೂಲಕ ಸಾಮಾಜಿಕ ಸಾಮರಸ್ಯತೆ ಚಿತ್ರ ರಚನಾ ಸ್ಪರ್ಧೆ

ಮೈಸೂರಿನ ಸರಸ್ವತಿಪುರಂನ ವಿಜಯವಿಠಲ ಶಾಲೆಯ ಪಕ್ಕದ ರೋಟರಿ ವೆಸ್ಟ್ ಶಾಲೆಯಲ್ಲಿ ಸೆಪ್ಟೆಂಬರ್ 11ರಂದು ಬೆಳಿಗ್ಗೆ 8.30ರಿಂದ 10ರವರೆಗೆ ರಕ್ಷಾ ಬಂಧನದ ಮೂಲಕ ಸಾಮಾಜಿಕ ಸಾಮರಸ್ಯತೆ ವಿಷಯದ ಕುರಿತು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ನಗರ ಮಟ್ಟದ ಚಿತ್ರರಚನಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇದೇ ಸಂದರ್ಭ  ಜಿಎಸ್ಎಸ್  ಯೋಗ ಸಂಶೋಧನಾ ಪ್ರತಿಷ್ಠಾನ, ವಿಜಯವಿಠಲ ವಿದ್ಯಾ ಸಂಸ್ಥೆ ಮತ್ತು ಇತರ ಸಂಸ್ಥೆಗಳ ಸಹಯೋಗದೊಂದಿಗೆ ಸುರಕ್ಷಾ – ಸ್ವರಕ್ಷಾ ಹೆಸರಿನಲ್ಲಿ ವಿಜಯವಿಠಲ ಶಾಲೆಯ ಆವರಣದಲ್ಲಿ ಭ್ರಾತೃತ್ವದ ಸಂಕೇತದ ಹಬ್ಬವಾದ ರಕ್ಷಾಬಂಧನ ಆಚರಣೆ ನಡೆಯಲಿದೆ. ಚಿತ್ರ ರಚನಾ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಸೆಪ್ಟೆಂಬರ್ 9ರೊಳಗೆ ಜಿಎಸ್ಎಸ್ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಪ್ರತಿ ವಿಭಾಗದ ಚಿತ್ರಗಳಲ್ಲಿ 3 ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿ ಬಹುಮಾನಗಳನ್ನು ಆಯಾಯ ಶಾಲೆಗಳಲ್ಲಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಚಾಲಕ ಕೆ. ಪಿ. ಪ್ರದ್ಯುಮ್ನ ಅವರನ್ನು ದೂರವಾಣಿ ಸಂಖ್ಯೆ  9448291368 ಮೂಲಕ ಸಂಪರ್ಕಿಸಬಹುದು.

Leave a Reply

comments

Related Articles

error: