ಕ್ರೀಡೆವಿದೇಶ

ಝಿಂಬಾಬ್ವೆ ಬ್ಯಾಟ್ಸ್‌ಮನ್ ಬ್ರೆಂಡನ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ

ಬೆಲ್ಫಾಸ್ಟ್,ಸೆ.13-ಝಿಂಬಾಬ್ವೆಯ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಬ್ರೆಂಡನ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.

ಇಂದು ಐರ್ಲೆಂಡ್ ವಿರುದ್ಧ ಕೊನೆಯ ಪಂದ್ಯ ಆಡಲಿದ್ದಾರೆ. ನನ್ನ ಪ್ರೀತಿಯ ದೇಶಕ್ಕಾಗಿ ನಾಳೆ ನನ್ನ ಕೊನೆಯ ಆಟ ಎಂದು ಭಾರದ ಹೃದಯದಿಂದ ಹೇಳುತ್ತಿರುವೆ. 17 ವರ್ಷಗಳಲ್ಲಿ ತೀವ್ರ ಏರಿಳಿತ ಕಂಡಿದ್ದೇನೆ ಎಂದು ಟೇಲರ್ ಟ್ವಿಟರ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

34 ವರ್ಷದ ಬ್ಯಾಟ್ಸ್‌ಮನ್ ರವಿವಾರ ಝಿಂಬಾಬ್ವೆ ಕ್ರಿಕೆಟ್, ತಂಡದ ಸದಸ್ಯರು, ಕುಟುಂಬ ಮತ್ತು ಅಭಿಮಾನಿಗಳಿಗೆ ಭಾವನಾತ್ಮಕ ಟಿಪ್ಪಣಿಯಲ್ಲಿ ಧನ್ಯವಾದ ಅರ್ಪಿಸಿದರು.

ಟೇಲರ್ 2004 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಝಿಂಬಾಬ್ವೆಯ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದರು. ಟೇಲರ್ 204 ಏಕದಿನ ಪಂದ್ಯಗಳಿಂದ 6,677 ರನ್ ಗಳಿಸಿದ್ದಾರೆ ಹಾಗೂ ಝಿಂಬಾಬ್ವೆಯ ಮಾಜಿ ಬ್ಯಾಟ್ಸ್‌ಮನ್ ಆಯಂಡಿ ಫ್ಲವರ್ (6,786) ಅವರ ರಾಷ್ಟ್ರೀಯ ದಾಖಲೆಯನ್ನು ಮುರಿಯಲು ಕೇವಲ 112 ರನ್ ಕೊರತೆ ಎದುರಿಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: