ಮೈಸೂರು

ಕೃಷ್ಣಮೂರ್ತಿ ಬಡಾವಣೆಯಲ್ಲಿ ಮನೆ ಮನೆ ಪಾದಯಾತ್ರೆ ನಡೆಸಿದ ಮಾಜಿ ಶಾಸಕ ಎಂ ಕೆ ಸೋಮಶೇಖರ್

ಮೈಸೂರು,ಸೆ.13:- ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 43 ರ ಕೃಷ್ಣಮೂರ್ತಿ ಬಡಾವಣೆಯಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಹಾಗೂ ಪಾಲಿಕೆ ಸದಸ್ಯರಾದ ಜೆ ಗೋಪಿ ಅವರು ಮನೆ ಮನೆ ಬಾಗಿಲಿಗೆ ಪಾದಯಾತ್ರೆ ತೆರಳಿ ಕೋವೀಡ್ ಲಸಿಕಾ ಜಾಗೃತಿ ಮೂಡಿಸಿ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಆಲಿಸಿದರು.
ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ಸೋಮಶೇಖರ್,ಸ್ಥಳೀಯ ಕಾಂಗ್ರೆಸ್ ಮುಖಂಡರುಗಳಾದ ಪರಮೇಶ್ ಕೆಂಪನಂಜಯ್ಯ,ಮಹೇಶ್,ಸುರೇಶ್ ಗೌಡ,ಗುರುಮಲ್ಲು,ಕುಮಾರ್,ಮಹೇಂದ್ರ,ನಾಗದೇವ,ಗುಣಶೇಖರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: