ದೇಶಪ್ರಮುಖ ಸುದ್ದಿ

ಉತ್ತರ ಪ್ರದೇಶವು ಅಭಿವೃದ್ಧಿ ಅಭಿಯಾನದಲ್ಲಿ ಮುಂಚೂಣಿಯಲ್ಲಿದೆ: ಪ್ರಧಾನಿ ಮೋದಿ

ಲಖನೌ,ಸೆ.14- ಜಾಟ್​ ಸಮುದಾಯದ ಐಕಾನ್​ ರಾಜಾ ಮಹೇಂದ್ರ ಪ್ರತಾಪ್​ಸಿಂಗ್​ ಹೆಸರಿನಲ್ಲಿ ಆಲಿಗಢದಲ್ಲಿ ಸ್ಥಾಪನೆಯಾಗಿರುವ ನೂತನ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಅಲಿಘರ್ ಮತ್ತು ಪಶ್ಚಿಮ ಉತ್ತರ ಪ್ರದೇಶಕ್ಕೆ ದೊಡ್ಡ ದಿನ ಎಂದಿದ್ದಾರೆ.

ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಪ್ರದೇಶವು ಅಭಿವೃದ್ಧಿ ಅಭಿಯಾನಗಳಲ್ಲಿ ಮುಂಚೂಣಿಯಲ್ಲಿದೆ. ಒಂದು ಕಾಲದಲ್ಲಿ ದೇಶದ ಅಭಿವೃದ್ಧಿಗೆ ಅಡ್ಡಿಯಾಗಿ ಕಾಣುತ್ತಿದ್ದ ಯುಪಿ ಇಂದು ದೇಶದ ಅತಿದೊಡ್ಡ ಅಭಿವೃದ್ಧಿ ಅಭಿಯಾನಗಳನ್ನು ಮುನ್ನಡೆಸುತ್ತಿರುವುದು ನನಗೆ ಅಪಾರ ತೃಪ್ತಿಯನ್ನು ನೀಡುತ್ತದೆ ಎಂದರು.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಉತ್ತರ ಪ್ರದೇಶವು ಅನುಕೂಲಕರವಾದ ಗಮ್ಯಸ್ಥಾನವಾಗಿ ಉತ್ತರ ಪ್ರದೇಶ ಹೊರಹೊಮ್ಮುತ್ತಿದೆ. ಅನುಕೂಲಕರ ವಾತಾವರಣವನ್ನು ಬೆಳೆಸಿದಾಗ ಮತ್ತು ಅಗತ್ಯ ಸಂಪನ್ಮೂಲಗಳನ್ನು ಒದಗಿಸಿದಾಗ ಮಾತ್ರ ಇದು ಸಂಭವಿಸುತ್ತದೆ ಎಂದು ಪ್ರಧಾನಿ ತಿಳಿಸಿದರು.

ನಾನು ಇಂದು ಮಾಜಿ ಸಿಎಂ ಕಲ್ಯಾಣ್ ಸಿಂಗ್ ಅವರ ಉಪಸ್ಥಿತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ವಿಶ್ವವಿದ್ಯಾಲಯದ ಅಭಿವೃದ್ಧಿಯಿಂದ ಅವರು ತುಂಬಾ ಸಂತೋಷಪಡುತ್ತಿದ್ದರು ಎಂದು ಹೇಳಿದರು.

ಇಂದು ಉತ್ತರ ಪ್ರದೇಶವು ಡಬಲ್ ಎಂಜಿನ್ ಸರ್ಕಾರದ ದ್ವಿಗುಣ ಲಾಭದ ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ ಪ್ರಧಾನಿ, ಈ ಹಿಂದೆ ಡಬಲ್-ಎಂಜಿನ್ ಪದವನ್ನು ಬಳಿಸಿದ್ದ ಬಳಸಿದ ಪ್ರತಿಸ್ಪರ್ಧಿಗಳಿಗೆ ಪ್ರಧಾನಿ ತಿರುಗೇಟು ನೀಡಿದರು. (ಏಜೆನ್ಸೀಸ್​, ಎಂ.ಎನ್)

Leave a Reply

comments

Related Articles

error: