ಮೈಸೂರು

ಸದಸ್ಯರ ಮೊಬೈಲ್ ಕರೆ ಸ್ಥಗಿತ, ಅವಮಾನ ಮಾಡಿದಂತಾಗಿದೆ : ಎಂ.ಜೆ.ರವಿಕುಮಾರ್

ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್ ಗಳ ಸದಸ್ಯರ ಪೋನ್ ಗಳನ್ನು ಏಕಾಏಕಿ ಸ್ಥಗಿತಗೊಳಿಸಿರುವುದು ಅವಮಾನ ಮಾಡಿದಂತೆ ಎಂದು ಮೇಯರ್ ಎಂ.ಜೆ.ರವಿಕುಮಾರ್ ತಿಳಿಸಿದರು.

ಮೈಸೂರು ಮಹಾನಗರಪಾಲಿಕೆಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾರು ಯಾರು ಅನಗತ್ಯ ಕರೆಗಳನ್ನು ಮಾಡಿ ಪಾಲಿಕೆಗೆ ಹೆಚ್ಚಿನ ವೆಚ್ಚ ಬರುವಂತೆ ಮಾಡಿದ್ದಾರೋ ಬಿ.ಎಸ್.ಎನ್.ಎಲ್ ಅಂಥಹವರನ್ನು ತನಿಖೆಗೊಳಪಡಿಸಲಿ ಎಂದರು. 2007ರಲ್ಲಿ ಮಣಿವಣ್ಣನ್ ಜಾರಿಗೆಯಲ್ಲಿ ತಂದಿದ್ದರು. ಆದರೆ ಈಗ ಅದನ್ನು  ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಸೋಮವಾರ ನಗರದೆಲ್ಲೆಡೆ ಭಾರೀ ಬಿರುಗಾಳಿ ಮಳೆಗೆ ಮರ, ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಜನತೆ ನಮಗೆ ಸಮಸ್ಯೆ ಬಗೆಹರಿಸಲು ಕರೆ ಮಾಡಿದರೆ ಯಾವ ಸದಸ್ಯನ ನಂಬರ್ ಗಳೂ ಚಾಲ್ತಿಯಲ್ಲಿರಲಿಲ್ಲ. ಇಂಥಹ ಸಂದರ್ಭದಲ್ಲಿ ಸಾರ್ವಜನಿಕರು ಏನು ಮಾಡಬೇಕು. ಮೊಬೈಲ್ ಸಂಪರ್ಕ ಸ್ಥಗಿತಗೊಳಿಸಿರುವ ಕ್ರಮ ಸರಿಯಾದರೂ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ರತ್ನ ಲಕ್ಷ್ಮಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸದಸ್ಯರ ಮೊಬೈಲ್ ಬಿಲ್ ಗಳು ಹಲವರ ಕೈಲಿ ಓಡಾಡಿದ್ದು, ಅದರಲ್ಲಿ ಬಂದಿರೋ ಕರೆಯ ದರ ನೋಡಿ ಶಾಕ್ ಆಗಿದ್ದಾರೆ. ಸಾರ್ವಜನಿಕರ ತೆರಿಗೆ ಹಣಗಳು ಅಭಿವೃದ್ಧಿ ಕೆಲಸಗಳಿಗೆ ಉಪಯೋಗವಾಗದೇ ವೃಥಾ ಪೋಲಾಗುತ್ತಿರುವುದು ತಿಳಿದುಬಂದಿದ್ದು, ಛೀಮಾರಿ ಹಾಕುವಂತಾಗಿದೆ.

Leave a Reply

comments

Related Articles

error: