ದೇಶಪ್ರಮುಖ ಸುದ್ದಿ

ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ 72.77 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ವಿತರಣೆ: ಕೇಂದ್ರ ಸರ್ಕಾರ

ನವದೆಹಲಿ,ಸೆ.14- ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 72.77 ಕೋಟಿಗೂ ಹೆಚ್ಚು ಕೋವಿಡ್-19 ಲಸಿಕೆ ಡೋಸ್ ಅನ್ನು ಒದಗಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ.

1.6 ಕೋಟಿಗಿಂತ (1,60,75,000) ಹೆಚ್ಚು ಲಸಿಕೆ ಡೋಸ್‌ಗಳು ಇನ್ನೂ ಪೂರೈಕೆ ಹಂತದಲ್ಲಿವೆ. 4.49 ಕೋಟಿ (4,49,03,025) ಗಿಂತ ಹೆಚ್ಚು ಉಳಿಕೆ ಮತ್ತು ಬಳಕೆಯಾಗದ ಕೋವಿಡ್-19 ಲಸಿಕೆ ಡೋಸ್‌ಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ ಲಭ್ಯವಿವೆ ಎಂದು ಸಚಿವಾಲಯ ತಿಳಿಸಿದೆ.

ಕೇಂದ್ರ ಸರ್ಕಾರವು ಲಸಿಕೆ ಅಭಿಯಾನದ ವೇಗವನ್ನು ಹೆಚ್ಚಿಸಲು ಮತ್ತು ದೇಶದಾದ್ಯಂತ ಕೋವಿಡ್-19 ಲಸಿಕೆಯ ವ್ಯಾಪ್ತಿಯನ್ನು ವಿಸ್ತರಿಸಲು ಬದ್ಧವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚಿನ ಲಸಿಕೆ ಲಭ್ಯವಾಗುವಂತೆ ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುವ್ಯವಸ್ಥಿತಗೊಳಿಸುವ ಮೂಲಕ ಲಸಿಕೆ ಹಾಕುವಿಕೆಯನ್ನು ಹೆಚ್ಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಕೋವಿಡ್-19 ಲಸಿಕೆ ಹಾಕುವಿಕೆಯ ಸಾರ್ವತ್ರಿಕರಣದಲ್ಲಿ ಕೇಂದ್ರ ಸರ್ಕಾರವು ದೇಶದಲ್ಲಿ ಲಸಿಕೆ ತಯಾರಕರು ಉತ್ಪಾದಿಸುವ ಲಸಿಕೆಗಳಲ್ಲಿ 75 ಪ್ರತಿಶತವನ್ನು ಖರೀದಿಸಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಸುತ್ತದೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: