ಕರ್ನಾಟಕಪ್ರಮುಖ ಸುದ್ದಿ

ಸೆ. 17 ರಂದು ನಡೆಯುವ ಬೃಹತ್ ಲಸಿಕೆ ಮೇಳ ಯಶಸ್ವಿಗೊಳಿಸುವಂತೆ ಸೂಚನೆ

ರಾಜ್ಯ(ಹಾಸನ) ಸೆ.15:- ರಾಜ್ಯದ್ಯಾಂತ ಸೆ.17 ರಂದು ನಡೆಯುವ ಬೃಹತ್ ಲಸಿಕೆ ಮೇಳಕ್ಕೆ ಪೂರ್ವ ತಯಾರಿ ನಡೆಸಿ ಜಿಲ್ಲೆಗಳಿಗೆ ನೀಡಿರುವ ನಿಗದಿತ ಗುರಿಯನ್ನು ಸಾಧಿಸುವಂತೆ ಮುಖ್ಯಮಂತ್ರಿ ಎಸ್.ಬಸವರಾಜ್ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂಡಿಗೆ ವಿಡಿಯೊ ಸಂವಾದ ನಡೆಸಿ ಮಾತನಾಡಿದ ಅವರು ದುಡಿಯುವ ವರ್ಗ, ಕೊಳಚೆ ಪ್ರದೇಶ ನಗರ ಜನರುಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವವರನ್ನು ಆದ್ಯತಾ ಮೇರೆಗೆ ಮೊದಲು ಲಸಿಕೆ ನೀಡಿ ಎಂದರು.

ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಲಸಿಕೆಯ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು ಎಂದ ಅವರು ಹೆಚ್ಚಿನ ಲಸಿಕೆ ಕೇಂದ್ರಗಳನ್ನ ತೆರೆದು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಿ ಎಂದು ಅವರು ಹೇಳಿದರು.

ಲಸಿಕೆ ನಿಡುವಲ್ಲಿ ಹಿಂದುಳಿದಿರುವ ಜಿಲ್ಲೆಗಳು ಈ ಮಾಸಾಂತ್ಯದೊಳಗೆ ರಾಜ್ಯದ ಸರಾಸರಿಯಷ್ಟಾದರು ಗುರಿ ಸಾಧನೆ ಮಾಡಬೇಕು. ಈಗಾಗಲೇ ಉತ್ತಮ ಸಾಧನೆ ಮಾಡಿರುವ ಹಾಸನ ಸೆರಿದಂತೆ ಇತರೆ ಜಿಲ್ಲೆಗಳು ಅಭಿನಂದನರ್ಹವಾಗಿದ್ದು ಇನ್ನಷ್ಟೂ ಉತ್ತಮ ಗುರಿ ಸಾಧನೆ ಮಾಡಿ ನೆವಂಬರ್ ಅಂತ್ಯದೊಳಗೆ ಶೇ 100 ರಷ್ಟು ಲಸಿಕೆ ನೀಡುವಂತೆ ಕ್ರಮ ಕೈಗೊಳ್ಳಿ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. .ಸುಧಾಕರ್ ಅವರು ಮಾತನಾಡಿ ರಾಜ್ಯಾದ್ಯಂತ ಪ್ರತಿನಿತ್ಯ 5 ಲಕ್ಷ ಲಸಿಕೆ ನೀಡಬೇಕು ಹಾಗೂ ವಾರದಲ್ಲಿ ಪ್ರತಿ ಬುಧವಾರ 15 ಲಕ್ಷ ಲಸಿಕೆ ನೀಡಬೇಕು ಎಂದು ಅವರು ಹೇಳಿದರು.

ಕೋವಿಡ್ ತಪಾಸಣೆ ಲಸಿಕೆ ಹಾಗೂ ಚಿಕಿತ್ಸೆ ಉಚಿತವಾಗಿ ನೀಡಲಾಗಿತ್ತಿದೆ ಈ ಬಗ್ಗೆ
ವ್ಯಾಪಕ ಪ್ರಚಾರ ನೀಡಬೇಕು ಎಂದರು.

ಸೆ.17 ರಂದು ಪ್ರಧಾನ ಮಂತ್ರಿ ಅವರ ಜನ್ಮ ದಿನವಾಗಿದ್ದು ಅಂದು 30 ಲಕ್ಷ ಲಸಿಕೆ ನೀಡುವ ಗುರಿ ಹೊಂದುವಂತೆ ರಾಜ್ಯಾದ್ಯಂತ ನಡೆಯುವ ಲಸಿಕಾ ಮೇಳದಲ್ಲಿ ಜಿಲ್ಲೆಗಳಿಗೆ ನಿಗದಿ ಪಡಿಸಿರುವ ಲಸಿಕೆ ಗುರಿಯನ್ನು ಸಾಧಿಸುವಲ್ಲಿ ಹೆಚ್ಚಿನ ನಿಗಾವಹಿಸಬೇಕು ಎಂದರಲ್ಲದೆ ಜನರಲ್ಲಿ ಲಸಿಕೆಯ ಬಗ್ಗೆ ಇರುವ ಅಪನಂಬಿಕೆ ಹೋಗಲಾಡಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ಅರಿವು ಮೂಡಿಸಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಿ ಎಂದು ಅವರು ಹೇಳಿದರು.

ಸಭೆಯಲ್ಲಿ ಪ್ರವಸೋದ್ಯಮ ಮತ್ತು ಪರಿಸರ ಸಚಿವರಾದ ಆನಂದ್ ಸಿಂಗ್, ಮುಖ್ಯ ಕಾರ್ಯದರ್ಶಿ ಪಿ., ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮಾ, ಜಿಲ್ಲಾಧಿಕಾರಿ ಆರ್, ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ,ಎ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಹಾಗೂ ಮತ್ತಿತರರು ಹಾಜರಿದ್ದರು.(ಜಿ.ಕೆ,ಎಸ್.ಎಚ್)

Leave a Reply

comments

Related Articles

error: