ಮೈಸೂರು

ಸರಳ ದಸರಾಕ್ಕೆ ಆರು ಉಪ ಸಮಿತಿ ರಚಿಸಿ ಆದೇಶಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್

ಮೈಸೂರು,ಸೆ.15: -ಈ ಬಾರಿ ನಾಡಹಬ್ಬ ದಸರಾ ಉತ್ಸವವನ್ನು ಸರಳವಾಗಿ ಹಾಗೂ ಅರಮನೆ ಆವರಣಕ್ಕೆ ಸೀಮಿತಗೊಳಿಸಿ ಆಚರಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ದಸರಾ ಉಪ ಸಮಿತಿಗಳ ಸಂಖ್ಯೆಯನ್ನು 6ಕ್ಕೆ ಸೀಮಿತಗೊಳಿಸಲಾಗಿದೆ.

ಅ.7 ರಿಂದ 15ರವರೆಗೆ ನಾಡಹಬ್ಬ ನಡೆ ಯಲಿದ್ದು,ಉತ್ಸವಕ್ಕೆ ಅಗತ್ಯ ತಯಾರಿ ಮಾಡಿ ಕೊಳ್ಳಲು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ 6  ಉಪ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.

ಸ್ವಾಗತ ಮತ್ತು ಆಮಂತ್ರಣ

ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ (ಉಪ ವಿಶೇಷಾಧಿಕಾರಿ), ಮೈಸೂರು ಮಹಾ ನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಎಂ.ಜೆ. ರೂಪಾ (ಕಾರ್ಯಾಧ್ಯಕ್ಷೆ), ಪಾಲಿಕೆ ವಲಯ ಆಯುಕ್ತ ಎಂ.ನಂಜುಂಡಯ್ಯ (ಕಾರ್ಯದರ್ಶಿ).

ದೀಪಾಲಂಕಾರ ಸಮಿತಿ

ಸೆಸ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ (ಉಪವಿ ಶೇಷಾಧಿಕಾರಿ), ಅಧೀಕ್ಷಕ ಇಂಜಿನಿಯರ್ ನಾಗೇಶ್ ( ಕಾರ್ಯಾಧ್ಯಕ್ಷ), ಕಾರ್ಯಪಾಲಕ ಇಂಜಿನಿಯರ್‌ಬಿ.ಕೆ.ಯೋಗೇಶ್ (ಕಾರ್ಯದರ್ಶಿ),

ಮೆರವಣಿಗೆ ಸಮಿತಿ

ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ (ಉಪ ವಿಶೇಷಾಧಿ ಕಾರಿ), ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತ ಪ್ರದೀಪ್ ಗುಂಟೆ (ಕಾರ್ಯಾಧ್ಯಕ್ಷ), ದೇವರಾಜ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್. ಶಶಿಧರ್(ಕಾರ್ಯದರ್ಶಿ).

ಸಾಂಸ್ಕೃತಿಕ ಸಮಿತಿ

ಜಿಲ್ಲಾ ಪಂಚಾಯಿತಿ ಸಿಇಒ ಯೋಗೀಶ್ (ಉಪ ವಿಶೇಷಾಧಿಕಾರಿ), ರಂಗಾಯಣ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ (ಕಾರ್ಯಾಧ್ಯಕ್ಷ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಚನ್ನಪ್ಪ (ಕಾರ್ಯದರ್ಶಿ),

ಸ್ವಚ್ಛತೆ ಮತ್ತು ವ್ಯವಸ್ಥೆ ಸಮಿತಿ

ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್‌ರೆಡ್ಡಿ (ಉಪ ವಿಶೇ ಷಾಧಿಕಾರಿ), ಪಾಲಿಕೆ ಆರೋಗ್ಯಾಧಿಕಾರಿ ಡಿ.ಜಿ.ನಾಗರಾಜ್ (ಕಾರ್ಯಾಧ್ಯಕ್ಷ), ಆರೋ ಗ್ಯಾಧಿಕಾರಿ ಕೆ.ಹೇಮಂತ್‌ರಾಜು (ಕಾರ್ಯದರ್ಶಿ),

ಸ್ತಬ್ಧಚಿತ್ರ ಸಮಿತಿ

ಮುಡಾ ಆಯುಕ್ತ ಡಿ.ಬಿ.ನಟೇಶ್ (ಉಪ ವಿಶೇಷಾಧಿಕಾರಿ), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು (ಕಾರ್ಯಾ ಧ್ಯಕ್ಷ), ಜಿಲ್ಲಾ ಕೈಗಾರಿಕಾ ಕೇಂದ್ರದ ಮೇಘನಾ (ಕಾರ್ಯದರ್ಶಿ) ಇವರುಗಳನ್ನು ನೇಮಿಸಲಾಗಿದೆ.
ಎಲ್ಲ ಉಪ ಸಮಿತಿಗಳು ದಸರಾ ಉನ್ನತ ಮಟ್ಟದ ಸಮಿತಿ ಹಾಗೂ ಕಾರ್ಯಕಾರಿ ಸಮಿತಿಯ ತೀರ್ಮಾನಗಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸಬೇಕು. ದಸರಾ ಅನುದಾನವನ್ನು ನಿಯಮಾನುಸಾರ ಪಾರದರ್ಶಕತೆ ಯಿಂದ ವೆಚ್ಚ ಮಾಡಬೇಕು. ಸಮಿತಿಯ ಎಲ್ಲ ಸದಸ್ಯರು ತಮಗೆ ವಹಿಸಿದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಹಾಗೂ ಯಾವುದೇ ಲೋಪಕ್ಕೆ ಅವಕಾಶ ನೀಡದಂತೆ ನಿರ್ವಹಿಸ ಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ನಿರ್ದೇಶನ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: