ಮನರಂಜನೆಮೈಸೂರು

ರಂಗನಾಥ ದೇವಸ್ಥಾನಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿ

ಮಂಗಳವಾರ ಬೆಳಿಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ ಸಮೇತರಾಗಿ  ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದಲ್ಲಿರುವ ರಂಗನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕೊಳ್ಳೆಗಾಲದ ಶಿವನಸಮುದ್ರದಲ್ಲಿರುವ ರಂಗನಾಥ ದೇವಸ್ಥಾನ, ಈಶ್ವರನ ದೇವಸ್ಥಾನ ಹಾಗೂ ಶಿವನಸಮುದ್ರದ ಮಾರಮ್ಮನ ದೇವಾಲಯಕ್ಕೆ  ಕಳೆದ 10 ವಷ೯ಗಳಿಂದ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತ ಬಂದಿರುವ ನಟ ಶಿವರಾಜ್ ಕುಮಾರ್ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಶ್ರೀಚಕ್ರವಿರುವ ರಂಗನಾಥ ಸ್ವಾಮಿಗೆ ಬೆಣ್ಣೆ ಅಲಂಕೃತ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ  ಈಶ್ವರ ಹಾಗೂ ಶಿವನಸಮುದ್ರದ ದೇವಾಲಯಗಳಿಗೆ ಹೋಗಿ ಅಲ್ಲಿಯೂ ಕೂಡ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭ ಅವರನ್ನು ಸುತ್ತುವರಿದ ಅಭಿಮಾನಿಗಳು ಮೈಸೂರು ಪೇಟ ತೊಡಿಸಿ, ಸನ್ಮಾನಿಸಿ, ಸಂಭ್ರಮಿಸಿದರು. ದೇವಾಲಯದಲ್ಲಿ ಅಭಿಮಾನಿಗಳಿಗೆ ಹಾಗೂ ಭಕ್ತರಿಗೆ ಭೋಜನ ವ್ಯವಸ್ಥೆ ಏಪ೯ಡಿಸಿದ್ದ ಶಿವರಾಜ್ ಕುಮಾರ್ ಅಭಿಮಾನಿಗಳ ಜೊತೆಯಲ್ಲೆ ಊಟ ಮಾಡಿ ನಂತರ ಬೆಂಗಳೂರಿಗೆ ಹಿಂತಿರುಗಿದರು.

ಈ ಸಂದಭ೯ದಲ್ಲಿ ಪತ್ನಿ ಗೀತಾ ಶಿವರಾಜ್ ಕುಮಾರ್. ನಿಮಾ೯ಪಕ ಶ್ರೀಕಾಂತ್. ಸೇರಿದಂತೆ ಹಲವರು ಶಿವರಾಜ್ ಕುಮಾರ್ ಜೊತೆಗಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: