ಮೈಸೂರು

ಕರ್ತವ್ಯಕ್ಕೆ ಅಡ್ಡಿ : ದೂರು

ಮೈಸೂರು,ಸೆ.15:- ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹಾಗೂ ಅವರ ಆಪ್ತ ಸಹಾಯಕ ಕಛೇರಿ ಸಿಬ್ಬಂದಿಯವರುಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಮಾನವ ಹಿತ ರಕ್ಷಣಾ ಮತ್ತು ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಎಸ್.ವಂದನಾ ಮತ್ತು ಅಕ್ಷಯ್ ಅಂಬೇಕರ್ ಸೇರಿದಂತೆ ಇತರ ಸಹಚರರ ವಿರುದ್ಧ ದೂರು ನೀಡಲಾಗಿದೆ. ಸೆ.13ರಂದು ಕುಲಪತಿಯವರ ಕಛೇರಿಗೆ ಭೇಟಿ ನೀಡಿದ ಅವರು ನಾವು ಕೇಳಿದ ಮಾಹಿತಿ ಕೊಡಬೇಕೆಂದು ಏರು ಧ್ವನಿಯಲ್ಲಿ ಕೂಗಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಮಾಹಿತಿ ನೀಡದಿದ್ದರೆ ವಿವಿಗೆ ಭೇಟಿ ನೀಡುವ ನ್ಯಾಕ್ ಸಮಿತಿ ಎದುರು ಪ್ರತಿಭಟನೆ ನಡೆಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಕೆಲಸದ ಒತ್ತಡದ ನಡುವೆಯೂ ಅಂದು ಸಂಜೆ ಕೇಳಿದ ಮಾಹಿತಿಯನ್ನು ಪೊಲೀಸರ ಸಮ್ಮುಖದಲ್ಲಿ ನೀಡಲಾಗಿದೆ ಎಂದು ಕುಲಸಚಿವ ಆರ್.ಶಿವಪ್ಪ ತಿಳಿಸಿದ್ದಾರೆ. ಕುಲಪತಿಯವರು ಕಾನೂನಾತ್ಮಕವಾಗಿ ಸರ್ಕಾರದ ಸರ್ಕಾರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕಾರ್ಯ ಚಟುವಟಿಕೆಗೆ ಅಡ್ಡಿಪಡಿಸುವುದು ತೊಂದರೆ ನೀಡುವುದು ಶಿಕ್ಷಾರ್ಹವಾಗಿದೆ. ಆದ್ದರಿಂದ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಂಡು ಮೈಸೂರು ವಿವಿ ಮತ್ತು ಅದರ ಘನತೆಗೆ ನ್ಯಾಯ ಒದಗಿಸಬೇಕೆಂದು ಪೊಲೀಸರಿಗೆ ದೂರು ನೀಡಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: