ಮೈಸೂರು

ಇಂದು ಮೈಸೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದೆ ನ್ಯಾಕ್ ಸಮಿತಿ

ಮೈಸೂರು,ಸೆ.15:- ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರೀಯ ವೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ  ನ್ಯಾಕ್  ಇಂದು   ಭೇಟಿ ನೀಡುತ್ತಿದ್ದು, ಎರಡು ದಿನ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಲಿದೆ.

ನ್ಯಾಕ್ ವಿಶ್ವವಿದ್ಯಾಲಯಗಳಿಗೆ ಪ್ರತಿ ಐದು ವರ್ಷಕ್ಕೊಮ್ಮೆ   ಭೇಟಿ ನೀಡುವುದು ವಾಡಿಕೆ.  2014ರಿಂದ 2019ರವರೆಗೆ ನೀಡಿದ ಡೇಟಾವನ್ನೇ ನ್ಯಾಕ್ ಸಮಿತಿ ಪರಿಗಣಿಸಲಿದೆ.  700 ಅಂಕಕ್ಕೆ ಈಗಾಗಲೇ ವರದಿ ಕಳುಹಿಸಲಾಗಿದೆ. ನ್ಯಾಕ್ ಕಮಿಟಿ ಉಳಿದ 300 ಅಂಕವನ್ನು ನೀಡಲಿದೆ. ಒಂದೂವರೆ ತಿಂಗಳಿನಿಂದ ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಮೊದಲಿಗೆ ಮೂಲ ಸೌಕರ್ಯವನ್ನು ನೋಡುತ್ತಾರೆ. 10 ವಿಭಾಗವನ್ನು ಅವರೇ ಆಯ್ಕೆ ಮಾಡಿಕೊಂಡು ಭೇಟಿ ನೀಡುತ್ತಾರೆ.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಪ್ರತಿಕ್ರಿಯಿಸಿ  ನ್ಯಾಕ್ ಸಮಿತಿ ಸಂಶೋಧನಾ ಸೌಲಭ್ಯ, ಕ್ರೀಡಾಂಗಣ, ಆ್ಯಂಪಿ ಥಿಯೇಟರ್ ಎಲ್ಲವನ್ನೂ ವೀಕ್ಷಣೆ ಮಾಡಲಿದೆ. 7 ಜನರು ಒಂದೊಂದು ತಂಡವಾಗಿ ಬೇರೆ ಬೇರೆ ಕಡೆ ಭೇಟಿ ನೀಡಲಿದೆ. ಅಧ್ಯಾಪಕರು, ಹಳೆಯ ವಿದ್ಯಾರ್ಥಿಗಳು, ಪೋಷಕರೊಂದಿಗೂ ಮಾತುಕತೆ ನಡೆಸಲಿದೆ. ಈ ಬಾರಿ ಗ್ರೇಡ್ ವಿಧಾನ ಬದಲಾಗಿದೆ. ಎ ಪ್ಲಸ್‌ ಪ್ಲಸ್ ಅತ್ಯುನ್ನತ ದರ್ಜೆ. ನಂತರದ್ದು ಎ ಪ್ಲಸ್, ಎ, ಬಿ ಮುಂತಾದ ಗ್ರೇಡ್‌ ಗಳಿದೆ. ಹಾಗಾಗಿ ಎ ಪ್ಲಸ್‌ ಪ್ಲಸ್ ಗ್ರೇಡ್ ಪಡೆಯುವುದು ನಮ್ಮ ಗುರಿ ಎಂದು   ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: